ಮುಂಬೈ(ಮಹಾರಾಷ್ಟ್ರ): ಪಾಲ್ಘರ್ ಗುಂಪು ಹತ್ಯೆಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವವರಿಗೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ತಿರುಗೇಟು ನೀಡಿದ್ದಾರೆ.
ಪಾಲ್ಘರ್ ಗುಂಪು ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡಬೇಡಿ: ಶರದ್ ಪವಾರ್ - ಶರದ್ ಪವಾರ್ ಹೇಳಿಕೆ
ಮಕ್ಕಳ ಕಳ್ಳರು ಎಂಬ ತಪ್ಪು ಮಾಹಿತಿಯಿಂದ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಇಬ್ಬರು ಸಾಧುಗಳು ಸೇರಿ ಮೂವರನ್ನು ಹೊಡೆದು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುವುದು ಸರಿ ಅಲ್ಲ ಎಂದಿದ್ದಾರೆ.
ಕೊರೊನಾ ವೈರಸ್ನ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುವುದು ಮತ್ತು ಸಚಿವರ ರಾಜೀನಾಮೆಗೆ ಒತ್ತಾಯಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ ಪವಾರ್. ಕೆಲ ತಪ್ಪು ಮಾಹಿತಿಯಿಂದಾಗಿ ಈ ಘಟನೆ ನಡೆದಿದೆ. ತಕ್ಷಣ ಮಹಾರಾಷ್ಟ್ರದ ವಿಕಾಸ್ ಆಘಾಡಿ ಸರ್ಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ 100 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 16 ರಂದು ಮುಂಬೈನಿಂದ ಗುಜರಾತ್ನ ಸೂರತ್ಗೆ ಕಾರಿನಲ್ಲಿ ತೆರಳುತ್ತಿದ್ದ ಇಬ್ಬರು ಸಾಧುಗಳು ಸೇರಿ ಮೂರು ಜನರನ್ನು ಮಕ್ಕಳ ಕಳ್ಳರು ಎಂಬ ತಪ್ಪು ಮಾಹಿತಿಯಿಂದ ಪಾಲ್ಘರ್ ಗ್ರಾಮಸ್ಥರು ಹೊಡೆದು ಕೊಂದಿದ್ದರು.