ನವದೆಹಲಿ: ಎಸ್ಸಿಒ ಸಮಿತ್ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ವರ್ತನೆ ಕುರಿತಾಗಿ ಸ್ಪಷ್ಟೀಕರಣ ನೀಡಲು ಸುದ್ದಿಗೋಷ್ಠಿ ನಡೆಸಿದ ಪಾಕಿಸ್ತಾನದ ರಾಜಕಾರಣಿ ಇದೀಗ ನಗೆಪಾಟಲಿಗೀಡಾಗಿದ್ದಾರೆ.
ಹೌದು, ಬಿಶ್ಕೇಕ್ನಲ್ಲಿ ನಡೆದ ಎಸ್ಸಿಒ ಸಮಿತ್ ಸಭೆಯ ಉದ್ಘಾಟನೆ ವೇಳೆ ಸಭಿಕರೆಲ್ಲ ಎದ್ದುನಿಂತರೂ, ಇಮ್ರಾನ್ ಖಾನ್ ಎದ್ದು ನಿಲ್ಲಲಿಲ್ಲ. ಇದು ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಪಾಕಿಸ್ತಾನದ ಖೈಬರ್ ಪಕ್ತುಂಖ್ವ ಪ್ರಾಂತೀಯ ಸರ್ಕಾರದ ಶೌಕತ್ ಯೂಸಫ್ಝೈ ಸುದ್ದಿಗೋಷ್ಠಿ ನಡೆಸಿದರು. ಫೇಸ್ಬುಕ್ ಲೈವ್ನಲ್ಲಿಯೂ ಇದನ್ನು ಪ್ರಸಾರ ಮಾಡಲು ಮುಂದಾದರು. ಆದರೆ ಅಲ್ಲಿ ಆಗಿದ್ದೇ ಬೇರೆ!