ಇಸ್ಲಾಮಾಬಾದ್:ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದಿರನ ಅಂಗಳಕ್ಕೆ ಹಾರಿಬಿಟ್ಟಿರುವ ಚಂದ್ರಯಾನ-2 ಯೋಜನೆಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿ, ತಲೆಬಾಗಿದೆ. ನಿಜಕ್ಕೂ ಕಠಿಣ ಪರಿಶ್ರಮದಿಂದ ನೀವೂ ಮಾಡಿರುವ ಸಾಧನೆ ಸಣ್ಣದಲ್ಲ ಎಂದು ಹಾಡಿ ಹೊಗಳಿದೆ. ಇದರ ಮಧ್ಯೆ ಭಾರತದ ವಿಜ್ಞಾನಿಗಳ ಕಾಲೆಳೆಯುವ ಕೆಲಸಕ್ಕೆ ಕೈ ಹಾಕಿದ್ದ ನೆರೆಯ ಪಾಕ್ಗೆ ಇದೀಗ ಅಲ್ಲಿನ ಗಗನಯಾತ್ರಿ ಸಖತ್ ಆಗಿ ತಿರುಗೇಟು ನೀಡಿದ್ದಾರೆ.
ಪಾಕ್ನ ಮೊದಲ ಮಹಿಳಾ ಗಗನಯಾತ್ರಿ ನಮೀರಾ ಸಲೀಂ ಇಸ್ರೋ ಚಂದ್ರಯಾನ-2 ಸಾಧನೆಗೆ ಅಭಿನಂದನೆ ಸಲ್ಲಿಕೆ ಮಾಡಿದ್ದು, ಚಂದಿರನ ದಕ್ಷಿಣ ಧ್ರುವದಲ್ಲಿ ವಿಕ್ರಂ ಲ್ಯಾಂಡರ್ ಇಳಿಸುವ ನಿಮ್ಮ ಪ್ರಯತ್ನ ನಿಜಕ್ಕೂ ಐತಿಹಾಸಿಕವಾಗಿದ್ದು, ಅದಕ್ಕೆ ನಾನು ಅಭಿನಂದನೆ ಸಲ್ಲಿಕೆ ಮಾಡುವೆ ಎಂದು ತಿಳಿಸಿದ್ದಾರೆ.