ಸಿಯಾಲ್‌ಕೋಟ್ (ಪಾಕಿಸ್ತಾನ):ಕೆಲು ದಿನಗಳ ಹಿಂದೆ ಗಡಿಯಲ್ಲಿ ಭಾರತೀಯರು ಸೆರೆಹಿಡಿದಿದ್ದ, 'ಬೇಹುಗಾರಿಕಾ' ಎಂದು ಹೇಳುತ್ತಿರುವ ಪಾರಿವಾಳ ತನ್ನದು ಎಂದು ಪಾಕಿಸ್ತಾನದ ಬಗ್ಗ-ಶಕರ್‌ಗರ್ ಗ್ರಾಮದ ನಿವಾಸಿ ಹಬೀಬುಲ್ಲಾ ಎಂಬ ವ್ಯಕ್ತಿ ಹೇಳಿಕೊಂಡಿದ್ದಾನೆ.
ಪಾಕ್ ಪತ್ರಿಕೆಯ ವರದಿಯ ಪ್ರಕಾರ, ಭಾರತದಲ್ಲಿರುವ ಪಾರಿವಾಳದ ಜೋಡಿ ನನ್ನ ಬಳಿ ಇದೆ ಎಂದು ಪಾಕಿಸ್ತಾನದ ವ್ಯಕ್ತಿ ಖಚಿತಪಡಿಸಿದ್ದಾನೆ. 'ಅದು ನನ್ನ ಸಾಕು ಪಾರಿವಾಳ, ಅದು ಎಂದಿಗೂ ಬೇಹುಗಾರಿಕಾ ಅಥವಾ ಭಯೋತ್ಪಾದಕ ಪಾರಿವಾಳವಲ್ಲ' ಎಂದು ಸ್ಪಷ್ಟಪಡಿಸಿದ್ದಾನೆ.
ಪಾಕ್ನಿಂದ ಹಾರಿ ಬಂತು ಶಂಕಿತ ಬೇಹುಗಾರಿಕಾ ಪಾರಿವಾಳ... ಕೋಡ್ ವರ್ಡ್ ಹಿಂದೆ ಬಿದ್ದ ಪೊಲೀಸರು!
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ಮಾನ್ಯಾರಿ ಗ್ರಾಮದ ಸ್ಥಳೀಯರು ಈ ಪಾರಿವಾಳವನ್ನು ಸೆರೆ ಹಿಡಿದಿದ್ದರು. ಪಾರಿವಾಳದ ಕಾಲಿನಲ್ಲಿ ಕೋಡ್ ವರ್ಡ್ಗಳಿದ್ದ ಉಂಗುರ ಕಂಡುಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಗೂಢಾಚಾರಿಕೆ ಪಾರಿವಾಳ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದರು.
ಆದರೆ, ಹಬೀಬುಲ್ಲಾ, ತನಗೆ ಪಾರಿವಾಳಗಳ ಬಗ್ಗೆ ಒಲವಿದೆ. ತಮ್ಮ ಗ್ರಾಮವು ಭಾರತೀಯ ಭೂಪ್ರದೇಶದಿಂದ ಸುಮಾರು 4 ಕಿ.ಮೀ ದೂರದಲ್ಲಿದೆ ಎಂದು ಹೇಳಿದ್ದಾನೆ. ಪಾರಿವಾಳಗಳ ಪಾದದ ಸುತ್ತಲೂ ಉಂಗುರಗಳನ್ನು ಹಾಕಿದ್ದು, ಉಂಗುರಗಳಲ್ಲಿ ಮೊಬೈಲ್ ಸಂಖ್ಯೆಯನ್ನು ವಿಶೇಷವಾಗಿ ಕೆತ್ತಲಾಗಿದೆ ಅಂತ ಗ್ರಾಮಸ್ಥರು ಹೇಳಿದ್ದಾರೆ ಎಂದು ಪಾಕ್ ಪತ್ರಿಕೆ ವರದಿ ಮಾಡಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾರಿವಾಳವನ್ನು ಶಿಷ್ಟಾಚಾರ ಮತ್ತು ಗೌರವಗಳೊಂದಿಗೆ ಪಾಕಿಸ್ತಾನಕ್ಕೆ ಹಿಂದಿರುಗಿಸಬೇಕೆಂದು ಅದರ ಮಾಲೀಕ ಹಬೀಬುಲ್ಲಾ ಒತ್ತಾಯಿಸಿದ್ದಾನೆ.