ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಸಿಮ್​ ಖರೀದಿ ಮಾಡಿ ಪಾಕ್​ ಆರ್ಮಿಗೆ ಮಾರಾಟ... ಪಾಕ್​ ಮೂಲದ ವ್ಯಕ್ತಿಯ ಬಂಧನ! - ಪಾಕ್​ ಆರ್ಮಿಗೆ ಮಾರಾಟ

ಭಾರತದಲ್ಲಿ ಸಿಮ್​ ಕಾರ್ಡ್​ ಖರೀದಿ ಮಾಡಿ ಪಾಕ್​ ಆರ್ಮಿಗೆ ಮಾರಾಟ ಮಾಡಿ ಇಲ್ಲಿನ ರಕ್ಷಣಾ ಇಲಾಖೆ ಮಾಹಿತಿ ಪಡೆದುಕೊಳ್ಳಲು ಸಹಾಯ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನ ಹರಿಯಾಣ ಪೊಲೀಸರು ಬಂಧನ ಮಾಡಿದ್ದಾರೆ.

ಪಾಕ್​ ಮೂಲದ ವ್ಯಕ್ತಿಯ ಬಂಧನ

By

Published : Aug 27, 2019, 6:53 PM IST

ಹರಿಯಾಣ:ಭಾರತದ ರಕ್ಷಣಾ ಇಲಾಖೆಯ ಮಾಹಿತಿ ಪಡೆದುಕೊಳ್ಳಲು ನೆರವಾಗುವ ಉದ್ದೇಶದಿಂದ ಭಾರತದಲ್ಲಿ ಸಿಮ್​ ಕಾರ್ಡ್​ ಖರೀದಿ ಮಾಡಿ ಪಾಕ್​ಗೆ ನೀಡುತ್ತಿದ್ದ ವ್ಯಕ್ತಿಯೋರ್ವನನ್ನ ಬಂಧನ ಮಾಡುವಲ್ಲಿ ಹರಿಯಾಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಹರಿಯಾಣ ಅಪರಾಧ ತನಿಖಾ ಸಂಸ್ಥೆ -2 ಪಾಕ್​ ಮೂಲದ ವ್ಯಕ್ತಿ ಅಲಿ ಮುರ್ತಾಜ್​ನನ್ನ ಹರಿಯಾಣದ ಅಂಬಾಲಾದಲ್ಲಿ ಬಂಧನ ಮಾಡಿದ್ದಾರೆ. ಈತ 2016ರಿಂದ ಇಲ್ಲಿವರೆಗೆ ಬರೋಬ್ಬರಿ 9ಸಲ ಭಾರತಕ್ಕೆ ಭೇಟಿ ನೀಡಿದ್ದು, ಈ ಸಲ ಆತನಿಂದ ಮೂರು ಭಾರತೀಯ ಸಿಮ್​ ಕಾರ್ಡ್​ ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಎರಡು ಸಿಮ್​ ಆ್ಯಕ್ಟೀವ್​ ಆಗಿದ್ದು, ಇನ್ನೊಂದು ಸಿಮ್​ ಬಂದ್​ ಆಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್​ ತಿಳಿಸಿದ್ದಾರೆ.

ಇಲ್ಲಿಂದ ಸಿಮ್​ ಖರೀದಿ ಮಾಡಿ ಪಾಕ್​ ಯೋಧರಿಗೆ ಅವುಗಳನ್ನ ನೀಡಿ, ಭಾರತೀಯ ರಕ್ಷಣಾ ಇಲಾಖೆ ಮಾಹಿತಿ ಪಡೆದುಕೊಳ್ಳುತ್ತಿದ್ದಾಗಿ ತಿಳಿದು ಬಂದಿದ್ದು, ಈಗಾಗಲೇ ಆತನ ಮೇಲೆ ಕೇಸ್​​ ದಾಖಲು ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details