ಕರ್ನಾಟಕ

karnataka

ETV Bharat / bharat

ಲಾಕ್​ಡೌನ್ ; ಜೈಪುರದಲ್ಲಿ ಹಸಿವಿನಿಂದ ಬಳಲುತ್ತಿರುವ ಪಾಕಿಸ್ತಾನಿ ವಲಸಿಗರು

ಲಾಕ್​ಡೌನ್​ನಿಂದಾಗಿ ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬಗಳು ಜೈಪುರದಲ್ಲಿ ಆಹಾರಕ್ಕಾಗಿ ಪರದಾಡುವಂತಾಗಿದೆ.

ಜೈಪುರದಲ್ಲಿ ಹಸಿವಿನಿಂದ ಬಳಲುತ್ತಿರುವ ಪಾಕಿಸ್ತಾನಿ ವಲಸಿಗರು
ಜೈಪುರದಲ್ಲಿ ಹಸಿವಿನಿಂದ ಬಳಲುತ್ತಿರುವ ಪಾಕಿಸ್ತಾನಿ ವಲಸಿಗರು

By

Published : Apr 18, 2020, 10:11 PM IST

ಜೈಪುರ (ರಾಜಸ್ಥಾನ): ಪಾಕಿಸ್ತಾನಿ ವಲಸಿಗರಿಗೆ ಲಾಕ್​ಡೌನ್​ ವೇಳೆ ಸಹಾಯ ಮಾಡುವುದಾಗಿ ರಾಜಸ್ಥಾನ ಸರ್ಕಾರ ಭರವಸೆ ನೀಡಿದ್ದರೂ, ಅನೇಕ ಕುಟುಂಬಗಳು ಯಾವುದೇ ಸಹಾಯ ಸಿಗದೆ ಪರದಾಡುತ್ತಿವೆ.

ಪಾಕಿಸ್ತಾನದ ವಲಸೆ ಕುಟುಂಬಗಳನ್ನು ಸರ್ಕಾರಿ ಯೋಜನೆಗಳ ಅಡಿಯಲ್ಲಿ ತರಲು ರಾಜಸ್ಥಾನ ಸರ್ಕಾರ ಏಪ್ರಿಲ್ 8 ರಂದು ನಿರ್ಧರಿಸಿತ್ತು. ಆದರೆ ಈವರೆಗೆ ಯಾವುದೇ ಸರ್ಕಾರಿ ಪ್ರತಿನಿಧಿಗಳು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಪಾಕಿಸ್ತಾನಿ ವಲಸಿಗರು ಆರೋಪಿಸಿದರು.

ಪಾಕಿಸ್ತಾನದ ರಹೀಂ ಯಾರ್ ಜಿಲ್ಲೆಯಿಂದ ವಲಸೆ ಬಂದು ಈಗ ಜೈಪುರದಲ್ಲಿ ವಾಸಿಸುತ್ತಿರುವ ಅರವಿಂದ್ ರಾಮ್ ಕುಟುಂಬ ಆಹಾರವಿಲ್ಲದೇ ಹಸಿವಿನಿಂದ ಬಳಲುತ್ತಿದೆ. ಲಾಕ್‌ಡೌನ್ ಜಾರಿಗೊಳಿಸುವ ಮೊದಲು ಉಡುಪುಗಳನ್ನು ಮಾರಾಟ ಮಾಡುತ್ತಿದ್ದ ಅರವಿಂದ್ ಅವರಿಗೆ ಈಗ ಕೆಲಸವಿಲ್ಲ. ಯಾವುದೇ ಜೀವನೋಪಾಯವಿಲ್ಲದೆ ಮತ್ತು ಸರ್ಕಾರದ ಸಹಾಯವೂ ಇಲ್ಲದೇ ಕುಟುಂಬ ಹೊತ್ತಿನ ಊಟಕ್ಕೂ ಚಿಂತಿಸುವ ಸ್ಥಿತಿಯಲ್ಲಿದೆ.

ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಸುಮಾರು 125 ಹಿಂದೂ ಕುಟುಂಬಗಳು ಪ್ರಸ್ತುತ ಜೈಪುರ ನಗರದ ಮಾನಸ ಸರೋವರ, ಗೋವಿಂದಪುರ ಮತ್ತು ಪಾಲ್ಡಿ ಮೀನಾ ಪ್ರದೇಶದ ಜಮದೋಲಿಯಲ್ಲಿ ವಾಸಿಸುತ್ತಿದ್ದಾರೆ. ಲಾಕ್​ಡೌನ್​ ವಿಸ್ತರಣೆಯಿಂದಾಗಿ ಈ ಕುಟುಂಬಗಳು ಈಗ ತೀವ್ರ ತೊಂದರೆ ಎದುರಿಸುತ್ತಿವೆ.

ನಿಮಿತೆಟಕಂ ಎಂಬ ಸಂಘಟನೆಯು 15 ದಿನಗಳಿಗಾಗುವಷ್ಟು ಪಡಿತರವನ್ನು ನೀಡಿದ್ದು, ಜಿಲ್ಲಾಡಳಿತದೊಂದಿಗೆ ಇವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದೆ. ಇದಾದ ಬಳಿಕ ಜಿಲ್ಲಾಡಳಿತವು ಜೈಪುರದಲ್ಲಿ ನೆಲೆಸಿರುವ ವಲಸಿಗ ಕುಟುಂಬಗಳ ಪಟ್ಟಿಯನ್ನು ಕೇಳಿತು. ಈ ಕುಟುಂಬಗಳ ಯೋಗಕ್ಷೇಮ ವಿಚಾರಿಸಲು ಸರ್ಕಾರಿ ಅಧಿಕಾರಿಗಳು ಒಂದೆರಡು ಕರೆಗಳನ್ನು ಮಾಡಿದ್ದು ಬಿಟ್ಟರೆ ಅಲ್ಲಿಂದ ಯಾವುದೇ ಸಹಾಯ ಸಿಕ್ಕಿಲ್ಲ.

ABOUT THE AUTHOR

...view details