ಜಿನೇವಾ: ಸುಳ್ಳು ಆರೋಪ ಮಾಡುವ ಪಾಕ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ 43ನೇ ಅಧಿವೇಶನದಲ್ಲಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ಸ್ವಿಟ್ಜರ್ಲ್ಯಾಂಡಿನ ಜಿನೇವಾದಲ್ಲಿರುವ ಮುಖ್ಯ ಕಚೇರಿಯಲ್ಲಿ ವಿಶ್ವಸಂಸ್ಥೆಯ ಮಾನ ಹಕ್ಕುಗಳ ಆಯೋಗದ 43ನೇ ಅಧಿವೇಶನದಲ್ಲಿ 'ಪ್ರತಿಕ್ರಿಯೆ ಹಕ್ಕು' ಸೆಷನ್ ವೇಳೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಮರ್ಶಾ ಆರ್ಯನ್ ಅವರು ಪಾಕ್ಗೆ ಮಾತಿನಲ್ಲೇ ಗುದ್ದಿದರು.
ಜಾಗತಿಕವಾಗಿ ಮಾನವ ಹಕ್ಕುಗಳನ್ನು ಪ್ರಚಾರ ಮಾಡುವುದು ಹಾಗೂ ರಕ್ಷಿಸುವುದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಜವಾಬ್ದಾರಿ. ಆದ್ರೆ ವಿಪರ್ಯಾವೆಂದ್ರೆ ಇಂತಹ ವೇದಿಕೆಯಲ್ಲಿ ಪಾಕ್, ರಾಜಕಾರಣ ಮಾಡುತ್ತಿದೆ ಎಂದು ನಮ್ಮ ಪ್ರತಿನಿಧಿ ತಿರುಗೇಟು ನೀಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಮರ್ಶಾ ಆರ್ಯನ್ ಅಷ್ಟೇ ಅಲ್ಲ ಮಾನವ ಹಕ್ಕುಗಳ ಬಗ್ಗೆ ಸುಳ್ಳು, ಕಪೋಲಕಲ್ಪಿತ ಕಾಳಜಿಯನ್ನು ಪಾಕ್ ತೋರುತ್ತಿದೆ. ಜಮ್ಮು ಕಾಶ್ಮೀರದಲ್ಲಿ ನಮ್ಮವರ ಮಾನವ ಹಕ್ಕುಗಳಿಗೆ ಉಗ್ರರ ತೊಟ್ಟಿಲು ಪಾಕಿಸ್ತಾನದಿಂದ ಬೆದರಿಕೆ ಇದೆ. ಇದನ್ನು ಆ ದೇಶದ ಪ್ರಮುಖರೇ ಒಪ್ಪಿಕೊಂಡಿದ್ದಾರೆ. ಜಮ್ಮು ಕಾಶ್ಮೀರ ಈ ಹಿಂದೆಯೂ ಭಾರತದ ಅವಿಭಾಜ್ಯ ಅಂಗವಾಗಿತ್ತು, ಮುಂದೆಯೋ ಆಗಿರಲಿದೆ. ಈ ಬಗ್ಗೆ ಪಾಕ್ ಆಸೆ ಬಿಡಬೇಕು ಎಂದು ಖಡಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೇಳಿದ್ದಾರೆ.