ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿಸಿ ಯತಾ ಸ್ಥಿತಿ ತಲುಪಿದ್ದು, ಪಾಕಿಸ್ತಾನದಿಂದ ಕಾಶ್ಮೀರದಲ್ಲಿರುವ ಅವರ ಜನರಿಗೆ ಸಂದೇಶಗಳನ್ನ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸ್ಥಿತಿ ಗತಿಗಳನ್ನ ಕುರಿತು ಮಾತನಾಡಿರುವ ದೋವಲ್, ಗಡಿಯ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಾಕಿಸ್ತಾನಕ್ಕೆ ಸೇರಿರುವ ಟವರ್ಗಳಿದ್ದು, ಅದರ ಮೂಲಕ ಇಲ್ಲಿರುವವರಿಗೆ ಸಂದೇಶಗಳನ್ನ ಕಳುಹಿಸಿಲು ಪ್ರಯತ್ನಿಸುತ್ತಿದ್ದಾರೆ. ನಾವು ಅದನ್ನ ಕೇಳಿಸಿಕೊಂಡಿದ್ದೇವೆ. ಕಾಶ್ಮೀರದಿಂದ ಸೇಬು ತುಂಬಿದ ಲಾರಿಗಳು ಹೋಗುತ್ತಿದ್ದು, ನೀವು ಅವನ್ನ ತಡೆಯಲು ಸಾಧ್ಯವಿಲ್ಲವೆ. ನಿಮಗೆ ಬಳೆಗಳನ್ನ ಕಳುಹಿಸಿ ಕೊಡಬೇಕಾ? ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬ ಪ್ರಶ್ನಿಸಿದ್ದಾನೆ ಎಂದು ದೋವಲ್ ತಿಳಿಸಿದ್ದಾರೆ.