ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ಭಾಗದಲ್ಲಿದ್ದ ಪಾಕ್ನ ನೆಲೆಯನ್ನು ಭಾರತೀಯ ಸೇನಾ ಪಡೆ ಧ್ವಂಸ ಮಾಡಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಭಾರತೀಯ ಸೇನೆ ಈ ವಿಡಿಯೋವನ್ನು ಇಂದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದೆ. ಧ್ವಂಸಗೊಂದ ಸ್ಥಳದಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವ ದೃಶ್ಯವಿದ್ದು, ಇದು ಅಪಾಯದ ಸಂಕೇತ ಎಂದು ಮೂಲಗಳು ತಿಳಿಸಿವೆ.
ಅಖ್ನೂರ್ ಭಾಗದಲ್ಲಿದ್ದ ಪಾಕ್ನ ನೆಲೆ ಧ್ವಂಸ ಮಾಡಿದ ಭಾರತೀಯ ಸೇನೆ ಅಖ್ನೂರ್ ಭಾಗದಲ್ಲಿದ್ದ ನೆಲೆಯ ಮೇಲೆ ಮತ್ತು ಕೆಳಗೆ ಪಾಕ್ ರಾಷ್ಟ್ರಧ್ವಜವಿತ್ತು. ಎರಡು ದಿನಗಳ ಹಿಂದೆಯೇ ಇದನ್ನು ಧ್ವಂಸಗೊಳಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.
ಪುಲ್ವಾಮ ದಾಳಿ, ಆನಂತರ ಏರ್ಸ್ಟ್ರೈಕ್ನ ನಂತರವೂ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ದಾಳಿ ನಡೆಸಿದ್ದರ ಪರಿಣಾಮ ಪಾಕ್ ನೆಲೆಯೊಂದು ಧ್ವಂಸಗೊಂಡಿದೆ.