ರಾಜಸ್ಥಾನ:ಭಾರತ - ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಖಜುವಾಲಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಹಾರಿಬಂದ ಬಲೂನ್ ಪತ್ತೆಯಾಗಿದೆ.
ಖಜುವಾಲಾದ ರೈತರ ಜಮೀನಿನಲ್ಲಿ ಪತ್ತೆಯಾಗಿರುವ ಈ ಬಲೂನ್ ಮೇಲೆ ಪಾಕ್ ಧ್ವಜದ ಮುದ್ರಣವಿದ್ದು, 'ಆಜಾದಿ ಮುಬಾರಕ್' (ಸ್ವಾತಂತ್ರ್ಯ ದಿನದ ಶುಭಾಶಯ) ಎಂದು ಬರೆಯಲಾಗಿದೆ. ಇಂದು ಬೆಳಗ್ಗೆ ಇದನ್ನು ಮೊದಲು ರೈತರು ನೋಡಿದ್ದು, ಖಜುವಾಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಲೂನ್ ಅನ್ನು ವಶಕ್ಕೆ ಪಡೆದಿದ್ದಾರೆ.