ನವದೆಹಲಿ: ಭಾರತದ ಗಡಿಯಲ್ಲಿಅಪ್ರಚೋದಿತ ದಾಳಿ ನಡೆಸುತ್ತಿದ್ದರೂ ಪಾಕ್, ಕಾರ್ಗಿಲ್ ಯುದ್ಧದಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಕೆಲವು ವರ್ಷಗಳಲ್ಲಿ ಅಪ್ರಚೋದಿತ ದಾಳಿ ಕೂಡ ನಿಲ್ಲಲ್ಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಸೂಕ್ಷ್ಮವಾಗಿ ಎಚ್ಚರಿಸಿದರು.
ಅಸುರಕ್ಷಿತ ಎನಿಸುವ ಯಾವುದೇ ಗಡಿಯನ್ನು ನಾವು ಬಿಟ್ಟಿಲ್ಲ. ಎಲ್ಲೆಡೆ ನಮ್ಮ ಸೇನೆ ಕಣ್ಗಾವಲು ಇರಿಸಿದ್ದು, ಬಿಗಿ ಬಂದೋಬಸ್ತ್ ಮಾಡಿದೆ. ಹೀಗಿರುವಾಗ ಕಾರ್ಗಿಲ್ ಯುದ್ಧದಂತಹ ಮತ್ತೊಂದು ಪ್ರಯತ್ನಕ್ಕೆ ಖಂಡಿತ ಪಾಕ್ ಕೈಹಾಕುವುದಿಲ್ಲ. ಏಕೆಂದರೆ ಅದರ ಪರಿಣಾವನೆಂದು ಚೆನ್ನಾಗಿ ಗೊತ್ತಾಗಿದೆ ಎಂದರು.