ಕರ್ನಾಟಕ

karnataka

ETV Bharat / bharat

ತವರಿನಲ್ಲೇ ಪಾಕ್​ಗೆ ಮಣ್ಣು ಮುಕ್ಕಿಸಿದ ಸಿಂಹಳೀಯರು: ಟಿ-20 ಸರಣಿ ಗೆದ್ದ ಶ್ರೀಲಂಕಾ! - ಟಿ-20 ಸರಣಿ ಗೆದ್ದ ಶ್ರೀಲಂಕಾ

ಬ್ಯಾಟಿಂಗ್​ ಹಾಗೂ ಬೌಲಿಂಗ್​​ನಲ್ಲಿ ಸಂಘಟಿತ ಪ್ರದರ್ಶನ ನೀಡರುವ ಶ್ರೀಲಂಕಾ ತಂಡ ನಂ.1 ಟಿ-20 ತಂಡ ಪಾಕ್​ಗೆ ಮಣ್ಣು ಮುಕ್ಕಿಸಿದೆ.

ಟಿ-20 ಸರಣಿ ಗೆದ್ದ ಶ್ರೀಲಂಕಾ

By

Published : Oct 7, 2019, 11:15 PM IST

Updated : Oct 7, 2019, 11:47 PM IST

ಲಾಹೋರ್​​:ಆತಿಥೇಯ ಪಾಕಿಸ್ತಾನದ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ಶ್ರೀಲಂಕಾ ತಂಡ ಟಿ-20 ಕ್ರಿಕೆಟ್​​ನಲ್ಲಿ ಸರಿಯಾಗಿ ತಿರುಗೇಟು ನೀಡಿದ್ದು, ಎರಡನೇ ಚುಟುಕು ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

ವಿಕೆಟ್​ ಕಿತ್ತ ಸಂಭ್ರಮ

ಮೊದಲ ಟಿ-20 ಪಂದ್ಯದಲ್ಲಿ 64 ರನ್ ಅಂತರದ ಅರ್ಹ ಗೆಲುವು ದಾಖಲಿಸಿದ್ದ ಸಿಂಹಳೀಯರ ತಂಡ, ಇಂದಿನ ಪಂದ್ಯದಲ್ಲೂ 35 ರನ್​ಗಳ ಗೆಲುವು ದಾಖಲು ಮಾಡಿಕೊಂಡಿದೆ. ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ ಟಿ-20 ನಂ.1 ತಂಡಕ್ಕೆ ತಿರುಗೇಟು ನೀಡಿದೆ.

ವಿಕೆಟ್​ ಪಡೆದ ನುವಾನ್​ ಪ್ರದೀಪ್​

ಗಡಾಫೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ ತಂಡ ಆರಂಭಿಕ ಅಘಾತದ ನಡುವೆ ರಾಜಪಕ್ಷೆ ಸ್ಫೋಟಕ 77 ರನ್​ ಹಾಗೂ ಜಯಸೂರ್ಯ 34 ರನ್​ ಹಾಗೂ ಕ್ಯಾಪ್ಟನ್​ ಶಂಕರ್​​ ಅಜೇಯ 27 ರನ್​ಗಳ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ​ನಷ್ಟಕ್ಕೆ 182 ರನ್ ​ಗಳಿಸಿತ್ತು.

183 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಪಾಕ್​ ಮತ್ತೊಮ್ಮೆ ಆರಂಭಿಕ ಅಘಾತಕ್ಕೊಳಗಾಯಿತು. ಮೊದಲ ಟಿ-20 ಪಂದ್ಯದಲ್ಲೇ ಮಾರಕ ಬೌಲಿಂಗ್​ ನಡೆಸಿದ್ದ ಪ್ರದೀಪ್​ 3 ರನ್​ ಗಳಿಸಿದ್ದ ಬಾಬಾರ್​ ಆಜಂ ವಿಕೆಟ್​ ಪಡೆದುಕೊಂಡರೆ, ರಂಜಿತ್​ 6 ರನ್​​​ ಗಳಿಸಿದ್ದ ಫಖಾರ್​ ಜಮಾನ್ ವಿಕೆಟ್​ ಕಿತ್ತರು. ಇದಾದ ಬಳಿಕ ಸೆಹ್ವಾಜ್​(13), ಕ್ಯಾಪ್ಟನ್​ ಸರ್ಫರಾಜ್​​(26), ಉಮರ್​ ಅಕ್ಮಲ್​(0) ಹಸರಂಗ್​ ಬಲೆಗೆ ಬಿದ್ದರು. ಒಂದೇ ಓವರ್​ನಲ್ಲಿ ಮೂರು ವಿಕೆಟ್​ ಕಿತ್ತ ಈ ಬೌಲರ್​ ಪಾಕ್​ ತಂಡಕ್ಕೆ ಮಾರಕವಾದರು. ಈ ವೇಳೆಗೆ ತಂಡದ ಸ್ಕೋರ್​ 7 ಓವರ್​ಗಳಲ್ಲಿ 5 ವಿಕೆಟ್ ​​ನಷ್ಟಕ್ಕೆ ಕೇವಲ 52 ರನ್​. ಮಧ್ಯಮ ಕ್ರಮಾಂಕದಲ್ಲಿ ಆಸೀಫ್​ ಅಲಿ(29), ಇಮಾದ್​ ವಾಸೀಂ(47)ರನ್​ಗಳಿಸಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ರು ಪ್ರಯೋಜವಾಗಲಿಲ್ಲ. ಇದಾದ ಬಳಿಕ ಬಂದ ಯಾವೊಬ್ಬ ಆಟಗಾರ ಕೂಡಾ​ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊನೆಯದಾಗಿ ತಂಡ 19 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 147 ರನ್​ ಮಾತ್ರ ಗಳಿಸಲು ಶಕ್ತವಾಯಿತು.

ಸರ್ಫರಾಜ್​ ವಿಕೆಟ್​ ಪತನ

ಲಂಕಾ ಪರ ನುಮಾನ್​ ಪ್ರದೀಪ್​ 4 ವಿಕೆಟ್​, ಹಸರಂಗ್​ 3 ವಿಕೆಟ್​, ಉದ್ದನ್​ 2 ವಿಕೆಟ್​ ಪಡೆದುಕೊಂಡರೆ, ರಂಜಿತ್​ 1 ವಿಕೆಟ್​ ಪಡೆದು ಮಿಂಚಿದರು. ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಾಜಪಕ್ಷೆ ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ 3 ಟಿ-20 ಪಂದ್ಯಗಳ ಸರಣಿಯಲ್ಲಿ ಲಂಕಾ 2-0 ಅಂತರದ ಮುನ್ನಡೆ ಪಡೆದುಕೊಂಡು ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈವಶ ಮಾಡಿಕೊಂಡಿದೆ.

Last Updated : Oct 7, 2019, 11:47 PM IST

ABOUT THE AUTHOR

...view details