ಜಮ್ಮು: ಇಲ್ಲಿನ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಸೇನೆಯು ಮತ್ತೆ ಅಪ್ರಚೋದಿತ ಶೆಲ್ ಮತ್ತು ಗುಂಡಿನ ದಾಳಿ ನಡೆಸಿದೆ.
ಪೂಂಛ್ನಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್! - ಅಪ್ರಚೋದಿತ ಶೆಲ್ ಮತ್ತು ಗುಂಡಿನ ದಾಳಿ
ಪೂಂಛ್ನ ಗುಲ್ಪುರ್ ವಲಯದಲ್ಲಿ ಪಾಕಿಸ್ತಾನ ಪಡೆಗಳು ಗುಂಡು ಹಾಗೂ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿದೆ.
ceasefire
"ಸೋಮವಾರ ಸಂಜೆ 7 ಗಂಟೆಗೆ ಪೂಂಛ್ನ ಗುಲ್ಪುರ್ ವಲಯದಲ್ಲಿ ಪಾಕಿಸ್ತಾನ ಪಡೆಗಳು ಗುಂಡು ಹಾಗೂ ಶೆಲ್ ದಾಳಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿಸಿವೆ. ಭಾರತೀಯ ಸೇನೆಯು ಸೂಕ್ತ ಪ್ರತೀಕಾರ ತೀರಿಸುತ್ತಿದೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಹೇಳಿದ್ದಾರೆ.
ಉಗ್ರರು ಭಾರತಕ್ಕೆ ನುಸುಳಲು ಸಹಾಯ ಮಾಡುವ ನಿಟ್ಟಿನಲ್ಲಿ ಪಾಕಿಸ್ತಾನ ಈ ರೀತಿಯ ಕೃತ್ಯ ಎಸಗುತ್ತಿದೆ ಎಂದು ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
Last Updated : May 19, 2020, 3:34 PM IST