ಪೂಂಚ್( ಜಮ್ಮು&ಕಾಶ್ಮೀರ): ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನ ಇಂದು ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿದೆ.
ಬೆಳಗ್ಗೆ 10.30 ರ ಸುಮಾರಿಗೆ ಪಾಕಿಸ್ತಾನ ಸೇನೆಯು ಮಂಕೋಟೆ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡು ದಾಳಿ ನಡೆಸಿ, ಮತ್ತೆ ಕದನ ವಿರಾಮ ಉಲ್ಲಂಘಿಸಿದೆ ಎಂದು ಸೇನೆ ತಿಳಿಸಿದೆ.
ಇದಕ್ಕೂ ಮೊದಲು ಜುಲೈ 23 ರಂದು ಪಾಕಿಸ್ತಾನ ಸೇನೆ, ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿನ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸ್ಥಳೀಯರೋರ್ವರು ಗಾಯಗೊಂಡಿದ್ದರು.
ಈ ವರ್ಷ ಇಲ್ಲಿಯವರೆಗೆ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಯಲ್ಲಿ ಒಟ್ಟು 21 ನಾಗರಿಕರು ಸಾವನ್ನಪ್ಪಿದ್ದು, 94 ಮಂದಿ ಗಾಯಗೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ವಾಸಿಸುತ್ತಿರುವ ನೂರಾರು ಗ್ರಾಮಸ್ಥರಿಗೆ ಕುಟುಂಬ ಸೇರಿದಂತೆ ದನ-ಕರುಗಳು ಮತ್ತು ಕೃಷಿ ಕ್ಷೇತ್ರಗಳ ಸುರಕ್ಷತೆಯ ಸಮಸ್ಯೆ ಸಮಸ್ಯೆ ಎದುರಾಗಿದೆ.