ಕುಪ್ವಾರ( ಜಮ್ಮು- ಕಾಶ್ಮೀರ):ಕಣಿವೆ ರಾಜ್ಯದ ಗಡಿಯಲ್ಲಿ ಪಾಕಿಸ್ತಾನ ನಿತ್ಯ ಕ್ಯಾತೆ ತೆಗೆಯುತ್ತಿದೆ. ಇಲ್ಲಿನ ತಂಗಧಾರ್ ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ.
ಕುಪ್ವಾರದಲ್ಲಿ ಪಾಕ್ ಸೇನೆ ಪಿರಂಗಿ ಹಾಗೂ ಶೆಲ್ ದಾಳಿ ನಡೆಸಿದೆ. ಪಾಕ್ ಸೈನಿಕರ ಈ ದುರ್ವರ್ತನೆಗೆ ಭಾರತೀಯ ಸೇನೆ ಕೂಡಾ ತಕ್ಕ ಪ್ರತ್ಯುತ್ತರ ನೀಡಿದೆ.