ಕರ್ನಾಟಕ

karnataka

ETV Bharat / bharat

ಕದನ ವಿರಾಮ ಉಲ್ಲಂಘಿಸಿದ ಪಾಕ್​: ಎಲ್​​ಒಸಿಯಲ್ಲಿ ಫೈರಿಂಗ್​​ - ಕದನ ವಿರಾಮ ಉಲ್ಲಂಘನೆ

ಜಮ್ಮ ಮತ್ತು ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ಗಡಿ ನಿಂಯಂತ್ರಣ ರೇಖೆಯ ಬಳಿ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆಸಿದೆ.

File Photo
ಸಂಗ್ರಹ ಚಿತ್ರ

By

Published : Nov 10, 2020, 12:46 PM IST

ಜಮ್ಮು: ಇಲ್ಲಿನ ಪೂಂಚ್ ಜಿಲ್ಲೆಯ ಶಹಪುರ್, ಕಿರ್ನಿ ಮತ್ತು ಕಸ್ಬಾ ಭಾಗದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಪಾಕಿಸ್ತಾನ ಗುಂಡಿನ ದಾಳಿ ನಡೆಸಿದ್ದು, ಕದನ ವಿರಾಮ ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ 10.30ಕ್ಕೆ ಪಾಕ್​ ಕದನ ವಿರಾಮ ಉಲ್ಲಂಘಿಸಿದೆ. ಇದಕ್ಕೂ ಮುನ್ನ ನವೆಂಬರ್ 7 ರಂದು ಪೂಂಚ್‌ನ ಮತ್ತೊಂದು ವಲಯದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿತ್ತು. ಈ ವರ್ಷದ ಆರಂಭದಿಂದಲೂ, ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ನಡೆಸಿದ 3,200 ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆಗಳಲ್ಲಿ 24 ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಬಂದಿದ್ದು, ಇಲ್ಲಿನ ಸಾವಿರಾರು ನಿವಾಸಿಗಳ ಮೇಲೆ ದಾಳಿ ನಡೆದಿದೆ. ಭಾರತೀಯ ಸೇನೆಯು ಇದಕ್ಕೆ ಪ್ರತ್ಯುತ್ತರವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಸೇನೆ ಹೇಳಿದೆ.

ABOUT THE AUTHOR

...view details