ಪೂಂಚ್: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿಂದು ಪಾಕಿಸ್ತಾನ ಸೇನೆ ಲಘು ಶಸ್ತ್ರಾಸ್ತ್ರಗಳೊಂದಿಗೆ ಗುಂಡಿನ ದಾಳಿ ನಡೆಸುವ ಮೂಲಕ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್ - ಮಂಕೋಟೆ ವಲಯದ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ
ಗಡಿಯಲ್ಲಿ ಪಾಕಿಸ್ತಾನ ಸೇನೆ ಲಘು ಶಸ್ತ್ರಾಸ್ತ್ರಗಳೊಂದಿಗೆ ಗುಂಡಿನ ದಾಳಿ ನಡೆಸುವ ಮೂಲಕ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ತಕ್ಕ ಉತ್ತರ ಕೊಟ್ಟಿದೆ.
Indian border
ಬೆಳಿಗ್ಗೆ 11:15ರ ಸುಮಾರಿಗೆ ಲಘು ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿ, ಶೆಲ್ ದಾಳಿ ಮಾಡುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ದಾಳಿ ನಡೆಸುತ್ತಿದ್ದು, ಸೇಡು ತೀರಿಸಿಕೊಳ್ಳುತ್ತಿದೆ.
ಇನ್ನು ಇದಕ್ಕೂ ಮುನ್ನ ಬೆಳಗ್ಗೆ 2:15ರ ಸುಮಾರಿಗೆ ಮಂಕೋಟೆ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಈ ವೇಳೆ ಭಾರತೀಯ ಸೇನೆ ಸಹ ಪ್ರತಿ ದಾಳಿ ಮಾಡಿ ತಕ್ಕ ಉತ್ತರ ಕೊಟ್ಟಿದ್ದು, ಮುಂಜಾನೆ 3ಕ್ಕೆ ಗುಂಡಿನ ದಾಳಿ ನಿಲ್ಲಿಸಿದೆ.