ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಪಾಕ್​ ಮತ್ತೆ ಕ್ಯಾತೆ.. ಕದನ ವಿರಾಮ ಉಲ್ಲಂಘಿಸಿ ಶೆಲ್​, ಗುಂಡಿನ ದಾಳಿ.. - Pakistan Violates

ಪದೇಪದೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ನಿಯಮಗಳನ್ನು ಉಲ್ಲಂಘಿಸಿ ಉಪದ್ರವ ನೀಡುತ್ತಿರುವ ಪಾಕ್​ನ ಭದ್ರತಾ ಪಡೆಗಳಿಗೆ ಭಾರತೀಯ ಯೋಧರೂ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ. ಭಾನುವಾರ ಶೆಲ್​ ಮತ್ತು ಗುಂಡಿನ ದಾಳಿ ನಡೆಸಿದ ಪಾಕ್​ ಪಡೆಗಳಿಗೆ ಪ್ರತಿ ದಾಳಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಸಾಂದರ್ಭಿಕ ಚಿತ್ರ

By

Published : Sep 1, 2019, 7:52 PM IST

ಕಾಶ್ಮೀರ:ಕಣಿವೆ ರಾಜ್ಯದ ಕಾಶ್ಮೀರದ ಪಂಚ್​ ಜಿಲ್ಲೆಯ ಗಡಿ ನಿಯಂತ್ರ ರೇಖೆ (ಎಲ್​ಒಸಿ) ಉದ್ದಕ್ಕೂ ಇರುವ ಸೇನಾ ನೆಲೆ ಮತ್ತು ಹಳ್ಳಿಗಳನ್ನು ಗುರಿಯಾಗಿಸಿಕೊಂಡು ಪಾಕ್​ ಪಡೆಗಳು ಶೆಲ್​ ದಾಳಿ ನಡೆಸಿದವು.

ಪದೇಪದೆ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ನಿಯಮಗಳನ್ನು ಉಲ್ಲಂಘಿಸಿ ಉಪದ್ರವ ನೀಡುತ್ತಿರುವ ಪಾಕ್​ನ ಭದ್ರತಾ ಪಡೆಗಳಿಗೆ ಭಾರತೀಯ ಯೋಧರೂ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ. ಭಾನುವಾರ ಶೆಲ್​ ಮತ್ತು ಗುಂಡಿನ ದಾಳಿ ನಡೆಸಿದ ಪಾಕ್​ ಪಡೆಗಳಿಗೆ ಪ್ರತಿ ದಾಳಿ ನಡೆಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಭಾರತೀಯ ಸೇನೆಯ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್ ಅವರು ಪೊಂಚ್​ ಹಾಗೂ ರಜೌರಿ ಜಿಲ್ಲೆಗಳ ನಿಯಂತ್ರಣ ರೇಖೆಯಲ್ಲಿರುವ ಯೋಧರನ್ನು ಭೇಟಿಯಾದ ಬೆನ್ನಲ್ಲೇ ಪಾಕ್​ ಈ ಕೃತ್ಯ ಎಸಗಿದೆ. ಗಡಿಯಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ.

ABOUT THE AUTHOR

...view details