ಕರ್ನಾಟಕ

karnataka

ETV Bharat / bharat

ಚೀನಾದ ಕರಾಳ ಮುಖ ಬಯಲು: ಭಾರತದ ಮೇಲೆ ಪಾಕ್ ದಾಳಿಗೆ ನೆರವು! - ಅತ್ಯಾಧುನಿಕ ಡ್ರೋನ್

ಪಾಕಿಸ್ತಾನಕ್ಕೆ ಅತ್ಯಾಧುನಿಕ ಡ್ರೋನ್​ಗಳನ್ನು ಮಾರಲು ಚೀನಾ ಮುಂದಾಗಿದೆ ಎಂದು ಭಾರತದ ಗುಪ್ತಚರ ದಳ ತಿಳಿಸಿದೆ.

ಪಾಕಿಸ್ತಾನಕ್ಕೆ ಅತ್ಯಾಧುನಿಕ ಡ್ರೋನ್​ಗಳನ್ನು ಮಾರಾಟ ಮಾಡಲು ಮುಂದಾದ ಚೀನಾ

By

Published : Mar 19, 2019, 9:19 PM IST

ನವದೆಹಲಿ: ಜೈಷೆ ಮೊಹಮ್ಮದ್​ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕುತ್ತಾ, ಪಾಕ್​ನ ಬೆನ್ನಿಗೆ ನಿಂತಿದ್ದ ಚೀನಾ ಇದೀಗ ತನ್ನ ಕರಾಳ ಮುಖ ತೋರಿಸಿದೆ. ಪಾಕ್​ಗೆ ಅತ್ಯಾಧುನಿಕ ಡ್ರೋನ್​ಗಳನ್ನು ಮಾರಲು ಮುಂದಾಗಿದ್ದು, ಭಾರತದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ.

ತನ್ನ ಅತ್ಯಾಧುನಿಕ ಡ್ರೋನ್​ಗಳಾದ 'Rainbow'ಗಳನ್ನು ಪಾಕ್​ಗೆ ಮಾರಾಟ ಮಾಡುವ ಮೂಲಕ ಚೀನಾ ಬಹಿರಂಗವಾಗಿಯೇ ಬೆಂಬಲ ಸೂಚಿಸಿದೆ. ಪಾಕ್​ ಆಕ್ರಮಿತ ಪ್ರದೇಶ ಬಾಲಕೋಟ್​ನಲ್ಲಿ ಭಾರತೀಯ ವಾಯುಪಡೆ ನಡೆಸಿದ ಏರ್​ಸ್ಟ್ರೈಕ್​ ನಂತರ ತನ್ನ Rainbow CH-4 ಹಾಗೂ CH5ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತದ ದಿಢೀರ್​ ದಾಳಿ ನಂತರ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ತನ್ನ ಗಡಿ ಸುತ್ತಲೂ ಕಾಣ್ಗಾವಲು ಇರಿಸಲು, ಡ್ರೋನ್​ಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಪಾಕ್​ಗೆ ಬೆಂಗಾವಲಾಗಿ ನಿಂತಿರುವ ಚೀನಾ ಇದಕ್ಕೆ ಸಹಾಯ ನೀಡಲು ಮುಂದಾಗಿದೆ.

CH-4 ಡ್ರೋನ್​ 400 ಕೆಜಿಯಷ್ಟು ಸ್ಫೋಟಕಗಳನ್ನು ಹೊತ್ತೊಯ್ಯುವ, 40 ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. 5 ಸಾವಿರ ಕಿಮೀವರೆಗೆ ತನ್ನ ವ್ಯಾಪ್ತಿ ಹೊಂದಿದೆ. ಹಾಗೆಯೇ CH-5 1000 ಕೆಜಿ ಸ್ಫೋಟಕಗಳನ್ನು ಹೊತ್ತೊಯ್ಯುವ, 60 ಗಂಟೆಗಳ ಕಾಲ ಗಾಳಿಯಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಇದು 17 ಸಾವಿರ ಅಡಿ ಎತ್ತರದಲ್ಲಿ ಹಾರಾಡಲಿದೆ ಎಂದು ತಿಳಿದುಬಂದಿದೆ.

ಇವುಗಳ ಮೂಲಕ ಭಾರತದ ವಾಯು ನೆಲೆ ಮೇಲೆ ದಾಳಿ ಮಾಡಲು ಸುಲಭವಾಗುತ್ತದೆ ಎಂದು ಪಾಕ್​ ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details