ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ರದ್ದು ಮಾಡುತ್ತಿದ್ದಂತೆ ಭಾರತದ ಮೇಲೆ ಪಾಕ್ ತಿರುಗಿಬಿದ್ದಿದ್ದು, ಈಗಾಗಲೇ ಭಾರತದೊಂದಿಗಿನ ವ್ಯವಹಾರಿಕ ದ್ವಿಪಕ್ಷೀಯ ಮಾತುಕತೆ ಹಾಗೂ ರಾಯಭಾರಿ ಕಚೇರಿ ಮುಚ್ಚಲು ನಿರ್ಧರಿಸಿದೆ.
ವಾಘಾ ಗಡಿಯಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ತಡೆ ಹಿಡಿದ ಪಾಕ್... ಸೇವೆ ಮುಂದುವರಿಯಲಿದೆ ಎಂದ ಭಾರತ! - ಆರ್ಟಿಕಲ್ 370 ರದ್ದು
ವಾಘಾ ಗಡಿಯಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ತಡೆ ಹಿಡಿಯಲಾಗಿದ್ದು, ಯಾವುದೇ ಕಾರಣಕ್ಕೂ ಸೇವೆ ಮುಂದುವರಿಯುವುದಿಲ್ಲ ಎಂದು ಪಾಕ್ ರೈಲ್ವೆ ಸಚಿವರು ಸೂಚನೆ ನೀಡಿದ್ದಾರೆ.
ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಪಾಕ್, ಉಭಯ ದೇಶದ ಗಡಿ ಮಧ್ಯೆ ಸಂಚರಿಸುತ್ತಿದ್ದ ಸಂಜೋತ್ ಎಕ್ಸ್‌ಪ್ರೆಸ್ ಸಂಚರಿಸದಂತೆ ಹಾಗೂ ಭಾರತೀಯ ಸಿನಿಮಾ ಪ್ರಸಾರ ಮಾಡದಿರಲು ನಿರ್ಧರಿಸಿದೆ. ಹೀಗಾಗಿ ಇಂದು ಪಾಕ್ನಿಂದ ಭಾರತಕ್ಕೆ ಬರಬೇಕಾದ ಸಂಜೋತಾ ಎಕ್ಸ್‌ಪ್ರೆಸ್ ರೈಲನ್ನು ಪಾಕ್ ಅಧಿಕಾರಿಗಳು ವಾಘಾ ಗಡಿಯಲ್ಲಿ ತಡೆ ಹಿಡಿದಿದ್ದಾರೆ. ಮಧ್ಯಾಹ್ನ 1ಗಂಟೆಗೆ ವಾಘಾ ಗಡಿಗೆ ಟ್ರೈನ್ ಬಂದು ತಲುಪಿದ್ದು, ಅಲ್ಲಿನ ಅಧಿಕಾರಿಗಳು ಭಾರತದ ಗಡಿಯೊಳಗೆ ಹೋಗದಂತೆ ತಡೆಹಿಡಿದಿದ್ದಾರೆ. ಹೀಗಾಗಿ ಪ್ರಯಾಣಿಕರು ಸುಮಾರು ಮೂರು ಗಂಟೆಗಳ ಕಾಲ ವಾಘಾ ಗಡಿಯಲ್ಲಿ ಕಾಯಬೇಕಾಯಿತು.
ಇದರ ಮಧ್ಯೆ ಭಾರತದ ಗಡಿಯೊಳಗೆ ರೈಲು ಓಡಿಸುವುದಿಲ್ಲ ಎಂದು ಅಲ್ಲಿನ ರೈಲ್ವೆ ಸಿಬ್ಬಂದಿ ಹೇಳಿದ್ದು, ಭಾರತೀಯ ಸಿಬ್ಬಂದಿ ಬಂದು ಅದನ್ನ ಭಾರತದ ಗಡಿಯೊಳಗೆ ತೆಗೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾರೆ. ಇದರ ಮಧ್ಯೆ ಮಾತನಾಡಿರುವ ಪಾಕಿಸ್ತಾನದ ಕೇಂದ್ರ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್, ಸಂಜೋತ್ ಎಕ್ಸ್‌ಪ್ರೆಸ್ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ. ನಾನು ರೈಲ್ವೆ ಸಚಿವನಾಗಿರುವವರೆಗೂ ಈ ರೈಲು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಭಾರತೀಯ ರೈಲ್ವೆ ಸಚಿವ ನಮ್ಮೊಂದಿಗೆ ಮಾತನಾಡುವವರೆಗೂ ರೈಲು ಸಂಚಾರ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ.