ನಜೀರಾಬಾದ್: ಕಿಡಿಗೇಡಿಗಳು ವೈಫೈ ನೆಟ್ವರ್ಕ್ಗೆ ಪಾಕ್ ಸ್ಲೋಗನ್ ಹೆಸರಿಟ್ಟಿರುವುದು ಬೆಳಕಿಗೆ ಬಂದಿದೆ.
ಯೋಗಿ ನಾಡಲ್ಲಿ ವೈಫೈ ನೆಟ್ವರ್ಕ್ಗೆ ಪಾಕ್ ಸ್ಲೋಗನ್...! - ಕಾನ್ಪುರ್ನಲ್ಲಿ ವೈಫೈ ನೆಟ್ವರ್ಕ್ಗೆ ಪಾಕ್ ಸ್ಲೋಗನ್
ಕೆಲ ಕಿಡಿಗೇಡಿಗಳು ವೈಫೈ ನೆಟ್ವರ್ಕ್ವೊಂದಕ್ಕೆ ಪಾಕ್ ಸ್ಲೋಗನ್ ಹೆಸರಿಟ್ಟಿರುವ ಪ್ರಕರಣ ಉತ್ತರಪ್ರದೇಶದ ನಜೀರಾಬಾದ್ನಲ್ಲಿ ಕಂಡು ಬಂದಿದೆ.

ನಜೀರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕಬಾಡಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಸೈಬರ್ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಖಾಸಗಿ ಕಂಪನಿಯ ನೌಕರನೊಬ್ಬ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದಾಗ ವೈಫೈ ನೆಟ್ವರ್ಕ್ ಆನ್ ಮಾಡಿದ್ದಾನೆ. ಈ ವೇಳೆ ವೈಫೈ ನೆಟ್ವರ್ಕ್ನಲ್ಲಿ ಪಾಕಿಸ್ತಾನ ಸ್ಲೋಗನ್ ಹೆಸರಿರುವುದು ಕಂಡು ಬಂದಿದ್ದು, ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ. ಕೂಡಲೇ ಪೊಲೀಸರು ವೈಫೈ ರೂಟರ್ನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಕಿಡಿಗೇಡಿಗಳು ವೈಫೈ ಹೆಸರನ್ನು ಬದಲಿಸಿದ್ದಾರೆ. ಆ ರೂಟರ್ ಬಳಕೆದಾರರ ಪತ್ತೆಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಣಿ ಗೀತಾಂಜಲಿ ತಿಳಿಸಿದ್ದಾರೆ.