ನವದೆಹಲಿ: ಭಾರತದ ಭಯೋತ್ಪಾದಕ ದಾಳಿ ನಡೆದಾಗಲೆಲ್ಲಾ ಪಾಕಿಸ್ತಾನ ಆತಂಕಕ್ಕೊಳಗಾಬೇಕಿದೆ. ಅವರು ಈ ಚಿಂತೆಗಳಿಂದ ಹೊರಬರಲು ಬಯಸಿದರೆ ಭಯೋತ್ಪಾದಕರಿಗೆ ಸಹಾಯ ಮಾಡುವುದನ್ನು ನಿಲ್ಲಿಸಬೇಕು ಎಂದು ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್.ಭದೌರಿಯಾ ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ - ಕಾಶ್ಮೀರದಲ್ಲಿ ಭಯೋತ್ಪಾದಕ ಶಿಬಿರಗಳು ಮತ್ತು ಲಾಂಚ್‌ಪ್ಯಾಡ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಇದ್ದಲ್ಲಿ, ತಮ್ಮ ಪಡೆ ದಿನದ 24 ಗಂಟೆಯೂ ಸಿದ್ಧವಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಮೇ ಮೊದಲ ವಾರದಲ್ಲಿ, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಲ್ ಅಶುತೋಷ್ ಶರ್ಮಾ ಮತ್ತು ಇತರ ಮೂವರು ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು.
ಪಾಕಿಸ್ತಾನ ತನ್ನ ಭಯೋತ್ಪಾದಕ ಶಿಬಿರಗಳು ಮತ್ತು ಲಾಂಚ್‌ಪ್ಯಾಡ್‌ಗಳ ಮೇಲೆ ಬಾಲಾಕೋಟ್ ಮಾದರಿಯ ವೈಮಾನಿಕ ದಾಳಿಗೆ ಹೆದರಿ, ಪಾಕಿಸ್ತಾನ ರಾತ್ರಿ ವೇಳೆ ಚಟುವಟಿಕೆ ನಡೆಸುತ್ತಿದೆ ಎಂದು ನೆರೆಯ ರಾಷ್ಟ್ರದ ವಿರುದ್ಧ ಗರಂ ಆದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿಯಂತ್ರಣ ರೇಖೆಗುಂಟ ಯಾವುದೇ ಭಯೋತ್ಪಾದಕ ಶಿಬಿರ ಅಥವಾ ಲಾಂಚ್‌ಪ್ಯಾಡ್ ಮೇಲೆ ದಾಳಿ ನಡೆಸಲು ತಮ್ಮ ಪಡೆ ಸಿದ್ಧವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅಗತ್ಯವಿದ್ದರೆ ಭಾರತೀಯ ವಾಯುಪಡೆ ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದೆ ಎಂದಿದ್ದಾರೆ.