ಕರ್ನಾಟಕ

karnataka

ETV Bharat / bharat

ಹೆತ್ತವರಿಗಾಗಿ ಗೀತಾ ಹುಡುಕಾಟ.. ಐದು ವರ್ಷದ ವನವಾಸಕ್ಕೆ ಅಂತ್ಯ ಯಾವಾಗ!? - ಕಿವಿ ಕೇಳದ ಮತ್ತು ಮಾತು ಬಾರದ ಮಹಿಳೆ ಗೀತಾ

ಸನ್ನೆ ಭಾಷೆಯಲ್ಲಿ ಮಾತನಾಡಿದ ಗೀತಾ, ನಾನು ಐದು ವರ್ಷಗಳಿಂದ ನನ್ನ ಹೆತ್ತವರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಹಲವಾರು ದಂಪತಿ, ನನ್ನ ಪೋಷಕರು ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ, ಅವರಲ್ಲಿ ನಾನು ಯಾರನ್ನೂ ಗುರುತಿಸಲು ಸಾಧ್ಯವಾಗಲಿಲ್ಲ..

parents
parents

By

Published : Jan 11, 2021, 3:01 PM IST

ಇಂದೋರ್(ಮಧ್ಯಪ್ರದೇಶ): ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ ಇಂದೋರ್ ಮೂಲದ ಕಿವಿ ಕೇಳದ ಮತ್ತು ಮಾತು ಬಾರದ ಮಹಿಳೆ ಗೀತಾ ಇನ್ನೂ ತನ್ನ ಹೆತ್ತವರ ಮಡಿಲು ಸೇರಿಲ್ಲ. ಅವರು ತನ್ನ ಪೋಷಕರನ್ನು ಹುಡುಕಲು ಅಧಿಕಾರಿಗಳೊಂದಿಗೆ ಮಹಾರಾಷ್ಟ್ರದ ಜಲ್ಗಾಂವ್​ಗೆ ಬಂದಿದ್ದಾಳೆ.

ಹಲವು ದಂಪತಿ, ಗೀತಾ ತಮ್ಮ ಕಳೆದುಹೋದ ಮಗಳು ಎಂದು ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೆ ನಾವು ಡಿಎನ್​ಎ ಪರೀಕ್ಷೆಗೆ ಒಳಪಡಲೂ ಸಿದ್ಧ ಎಂದಿದ್ದಾರೆ.

ಹೆತ್ತವರಿಗಾಗಿ ಗೀತಾ ಹುಡುಕಾಟ..

ಸನ್ನೆ ಭಾಷೆಯಲ್ಲಿ ಮಾತನಾಡಿದ ಗೀತಾ, ನಾನು ಐದು ವರ್ಷಗಳಿಂದ ನನ್ನ ಹೆತ್ತವರನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಹಲವಾರು ದಂಪತಿ, ನನ್ನ ಪೋಷಕರು ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ, ಅವರಲ್ಲಿ ನಾನು ಯಾರನ್ನೂ ಗುರುತಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಗೀತಾರಿಗೆ ಅವರ ಸಮುದಾಯದ ಹೊಸ ಜನರನ್ನು ಪರಿಚಯಿಸಲಾಗುತ್ತಿದೆ. ಅವರ ಪೋಷಕರ ಹುಡುಕಾಟದ ಭಾಗವಾಗಿ ಜಲ್ಗಾಂವ್​ಗೆ ಬಂದಿದ್ದೇವೆ ಅಂತಾ ಸನ್ನೆ ಭಾಷೆ ತಜ್ಞ ಜ್ಞಾನೇಂದ್ರ ಪುರೋಹಿತ್ ಹೇಳಿದ್ದಾರೆ.

ಸದ್ಯ ಗೀತಾ ಇಂದೋರ್​​ನಲ್ಲಿ ವಿಕಲಚೇತನರಿಗಾಗಿ ಕೆಲಸ ಮಾಡುವ ‘ಆನಂದ್ ಸರ್ವಿಸ್ ಸೊಸೈಟಿ’ ಎಂಬ ಎನ್​ಜಿಒದಲ್ಲಿ ವಾಸವಿದ್ದಾರೆ. ಅಲ್ಲಿನ ಸರ್ಕಾರಿ ಅಧಿಕಾರಿಗಳು ಆಕೆಯ ಪೋಷಕರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ABOUT THE AUTHOR

...view details