ಕರ್ನಾಟಕ

karnataka

ETV Bharat / bharat

ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿಯೇ ಉಳಿದ ಪಾಕಿಸ್ತಾನ! - ಪಾಕಿಸ್ತಾನ ಭಯೋತ್ಪಾದನೆ

ಅಕ್ರಮ ಹಣ ವರ್ಗಾವಣೆ ನಿಯಂತ್ರಿಸಲು 2001 ರಲ್ಲಿ ಪ್ಯಾರಿಸ್​ನ​ಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಸ್ಥಾಪಿಸಲಾದ ವಿಶೇಷ ಕಾರ್ಯಪಡೆಯ ವ್ಯಾಪ್ತಿಗೆ, ಪಾಕಿಸ್ತಾನ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ವಿಷಯ ಬಂದಿತ್ತು. ಕಳೆದ ವರ್ಷವಷ್ಟೇ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ, ಪಾಕಿಸ್ತಾನದಲ್ಲಿ 30 ರಿಂದ 40 ಸಾವಿರ ಸಕ್ರಿಯ ಭಯೋತ್ಪಾದಕರು ಇದ್ದಾರೆ ಎಂದು ಒಪ್ಪಿಕೊಂಡಿದ್ದರು.

terrorism
ಭಯೋತ್ಪಾದನೆ

By

Published : Aug 27, 2020, 1:01 PM IST

ಹೈದರಾಬಾದ್:ತನ್ನ ಉಗ್ರ ಸ್ವಭಾವದಿಂದಾಗಿ ಹಲವು ಬಾರಿ ಜಗತ್ತಿನ ಮುಂದೆ ಬೆತ್ತಲಾಗಿದ್ದರೂ, ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನವು ಸುರಕ್ಷಿತ ಸ್ವರ್ಗವಾಗಿಯೇ ಮುಂದುವರೆದಿದೆ.

ಹಣಕಾಸಿನ ಅಪರಾಧಗಳನ್ನು ಎದುರಿಸಲು ನೀತಿ ಹಾಗೂ ಮಾನದಂಡಗಳನ್ನು ವಿನ್ಯಾಸಗೊಳಿಸುವ ಮತ್ತು ಉತ್ತೇಜಿಸುವ ಅಂತರ್ ಸರ್ಕಾರಿ ಸಂಸ್ಥೆಯಾದ ಫೈನಾನ್ಸಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF)ನ ಕಠಿಣ ನಿರ್ಬಂಧಗಳನ್ನು ತಪ್ಪಿಸಲು ಪಾಕಿಸ್ತಾನವು ಭಯೋತ್ಪಾದಕರ ಎರಡು ಪಟ್ಟಿಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ 88 ನಿಷೇಧಿತ ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ನಾಯಕರ ವಿವರಗಳಿವೆ. ಇದರಲ್ಲಿ 1993ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಹೆಸರು ಕೂಡಾ ಇದೆ. ಈ ಪಟ್ಟಿ ಘೋಷಿಸಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನವು ದಾವೂದ್ ಹಾಗೂ ಇತರ ಭಯೋತ್ಪಾದಕರ ಆಸ್ತಿಯನ್ನು ವಶಪಡಿಸಿಕೊಂಡಿದೆ. ಆದರೆ, ಭಯೋತ್ಪಾದಕರಿಗೆ ಆಶ್ರಯ ನೀಡಿ ಪೋಷಿಸುತ್ತಿದೆ ಎಂಬ ವಿವಿಧ ರಾಷ್ಟ್ರಗಳ ಆರೋಪವನ್ನು ಪಾಕ್​ ತಳ್ಳಿಹಾಕಿದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ (UNSC) ಹೊರಡಿಸಿದ ಹೊಸ ಪಟ್ಟಿಗೆ ಅನುಸಾರವಾಗಿ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್​ನ ಗ್ರೇ ಲಿಸ್ಟ್​ನಿಂದ ಕೆಳ ಜಾರುವ ಪ್ರಯತ್ನದಲ್ಲಿ ಪಾಕಿಸ್ತಾನವು 88 ಹೊಸ ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಿಸಲು 2001 ರಲ್ಲಿ ಪ್ಯಾರಿಸ್​ನ​ಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಸ್ಥಾಪಿಸಲಾದ ವಿಶೇಷ ಕಾರ್ಯಪಡೆಯ ವ್ಯಾಪ್ತಿಗೆ, ಪಾಕಿಸ್ತಾನ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ವಿಷಯ ಬಂದಿತ್ತು. ಕಳೆದ ವರ್ಷವಷ್ಟೇ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ, ಪಾಕಿಸ್ತಾನದಲ್ಲಿ 30ರಿಂದ 40 ಸಾವಿರ ಸಕ್ರಿಯ ಭಯೋತ್ಪಾದಕರು ಇದ್ದಾರೆ ಎಂದು ಒಪ್ಪಿಕೊಂಡಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವಲ್ಲದೇ ನಮ್ಮ ದೇಶದ ಇತರ ರಾಜ್ಯಗಳಲ್ಲಿಯೂ ಭಯೋತ್ಪಾದನಾ ಚಟುವಟಿಕೆಯನ್ನು ಹೆಚ್ಚಿಸಲು ಪಾಕಿಸ್ತಾನವು ತನ್ನಿಂದ ಸಾಧ್ಯವಿರುವ ಎಲ್ಲ ಕೆಟ್ಟ ಮಾರ್ಗಗಳಲ್ಲಿಯೂ ಯತ್ನಿಸುತ್ತಿದೆ. ಭಾರತದ 74ನೇ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಯೋತ್ಪಾದಕ ಸಂಚು ರೂಪಿಸಲಾಗಿದ್ದ ಮಾಹಿತಿ ದೇಶಕ್ಕೆ ದೊರಕಿತ್ತು. ಆದರೆ, ಈ ಬೆದರಿಕೆಯನ್ನು ಭಾರತ ಸಮರ್ಥವಾಗಿ ಮಟ್ಟ ಹಾಕಿತ್ತು.

ಚೀನಾ, ಟರ್ಕಿ ಹಾಗೂ ಮಲೇಷ್ಯಾದ ಬೆಂಬಲದೊಂದಿಗೆ ಪಾಕಿಸ್ತಾನ FATFನ ಕ್ರಮದಿಂದ ತಪ್ಪಿಸಿಕೊಳ್ಳುತ್ತಿದೆ. ಆದರೂ ಪಾಪಿ ಪಾಕ್​ನ ಉಗ್ರಮುಖ ಮತ್ತೆ ಮತ್ತೆ ಜಗತ್ತಿಗೆ ತಿಳಿಯುತ್ತಿದೆ. ಪಾಕಿಸ್ತಾನ ಉಗ್ರರನ್ನು ತನ್ನ ಹೊಟ್ಟೆಯಲ್ಲಿಟ್ಟು ಪೋಷಿಸುತ್ತಿದೆ ಎಂದು ಭಾರತ ಹಲವು ವರ್ಷಗಳ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಅದು ಆಗಾಗ ಜಗತ್ತಿನ ಮುಂದೆ ಸಾಬೀತಾಗಿ, ಜಾಗತಿಕ ಮಟ್ಟದಲ್ಲಿ ಹಲವು ಬಾರಿ ಪಾಕ್​ ಬೆತ್ತಲಾಗಿದೆ. ಆದರೂ ಪಾಕ್​ ತನ್ನ ಹುಟ್ಟುಗುಣ ಬಿಡುತ್ತಿಲ್ಲ. ಹೀಗಾಗಿಯೇ ಪಾಕ್​ ಭಯೋತ್ಪಾದಕರ ಸ್ವರ್ಗವಾಗಿ ಮುಂದುವರಿದಿದೆ.

ABOUT THE AUTHOR

...view details