ಇಸ್ಲಮಾಬಾದ್: ಭಾರತ ಮತ್ತು ಪಾಕಿಸ್ತಾನ ಕಾಶ್ಮೀರದ ಸಮಸ್ಯೆಯತ್ತ ಪ್ರಪಂಚ ಗಮನಕೊಡದಿದ್ದರೆ ಯುದ್ಧ ಕಟ್ಟಿಟ್ಟ ಬುತ್ತಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಒಂದೆಡೆ ಯುದ್ಧೋನ್ಮಾದ.. ಮತ್ತೊಂದೆಡೆ ಶಾಂತಿ ಜಪ ಮಾಡುತ್ತಿದೆ ಪಾಕ್ - ಇಮ್ರಾನ್ ಖಾನ್
ಕಾಶ್ಮೀರದ ಜನರ ಮೇಲೆ ಭಾರತ ದೌರ್ಜನ್ಯ ನಡೆಸುತ್ತಿದ್ದು, ಇದನ್ನ ತಡೆಯದಿದ್ದರೆ ಅಣ್ವಸ್ತ್ರ ಯುದ್ಧ ಸಾಧ್ಯೆತ ಇದೆ ಎಂದು ಪಾಕಿಸ್ತಾನ ಪ್ರಧಾನಿ ಧಮ್ಕಿ ಹಾಕಿದ್ದಾರೆ. ಅದೇ ಗಳಿಗೆಯಲ್ಲಿ ಅಲ್ಲಿನ ವಿದೇಶಾಂಗ ಸಚಿವರು ಷರತ್ತು ಬದ್ಧ ಮಾತುಕತೆಗೆ ಸಿದ್ಧ ಎಂದು ಘೋಷಣೆ ಮಾಡಿದ್ದಾರೆ.
ಇಮ್ರಾನ್ ಖಾನ್
ಈ ಬಗ್ಗೆ ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದ್ದು, ಭಾತರ ಕಾಶ್ಮೀರದ ಜನರ ಮೆಲೆ ನಡೆಸುತ್ತಿರುವ ದೌರ್ಜನ್ಯವನ್ನ ತಡೆಯದಿದ್ದರೆ ಅಣ್ವಸ್ತ್ರ ಹೊಂದಿರುವ ಎರಡು ದೇಶಗಳ ಯುದ್ಧಕ್ಕೆ ಪ್ರಪಂಚ ಸಾಕ್ಷಿಯಾಗಬೇಕಾಗುತ್ತದೆ ಎಂದಿದ್ದಾರೆ.
ಆದ್ರೆ ಪಾಕಿಸ್ತಾನ ವಿದೇಶಾಂಗ ಸಚಿವರ ವರಸೆಯೇ ಬೇರೆಯಾಗಿದೆ. ಭಾರತದ ಜೊತೆ ಪಾಕಿಸ್ತಾನ ಷರತ್ತು ಬದ್ದ ಮಾತುಕತೆಗೆ ಸಿದ್ದವಿದೆ ಎಂದು ಪಾಕ್ ಸಚಿವ ಷಾ ಮಹಮ್ಮದ್ ಖುರೇಷಿ ಹೇಳಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.