ಇಸ್ಲಾಮಾಬಾದ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯರು 2019ರ ಬಾಲಾಕೋಟ್ ಮೇಲೆ ನಡೆಸಿದ ಸೇನಾ ದಾಳಿಯನ್ನು ಚುನಾವಣೆಗೆ ಲಾಭವಾಗಿ ಬಳಸಿಕೊಂಡಿದ್ದಾರೆ ಎಂದು ಸೂಚಿಸುವ ರಿಪಬ್ಲಿಕ್ ಟಿವಿ ನಿರೂಪಕ ಮತ್ತು ಮಾಜಿ ಮಾಧ್ಯಮ ಉದ್ಯಮದ ಕಾರ್ಯನಿರ್ವಾಹಕರ ನಡುವಿನ ಚಾಟ್ಗಳ ಬಗ್ಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಪ್ರಿಯ ನಿರೂಪಕ ಅರ್ನಾಬ್ ಗೋಸ್ವಾಮಿ ಮತ್ತು ಟಿವಿ ರೇಟಿಂಗ್ ಕಂಪನಿಯ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತಾ ನಡುವಿನ ವಾಟ್ಸ್ಆ್ಯಪ್ ಮೆಸೇಜ್ ಬಗ್ಗೆ ಭಾರತೀಯ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್, "ವೈಮಾನಿಕ ದಾಳಿ ನಡೆಸುವ ಮೂರು ದಿನದ ಮೊದಲು ಗೋಸ್ವಾಮಿಗೆ ದಾಳಿಯ ಬಗ್ಗೆ ತಿಳಿದಿತ್ತು. ಇನ್ನು ಈ ದಾಳಿಯನ್ನು ಮೋದಿಯವರಿಗೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಉಪಯೋಗಿಸಲಾಗಿದೆ" ಎಂದು ಆರೋಪಿಸಿದರು.