ನವದೆಹಲಿ: ಅಂತಾರಾಷ್ಟ್ರೀಯ ನ್ಯಾಯಾಲಯದ ನೆರವಿನಿಂದ ಸದ್ಯ ಮರಣದಂಡನೆಯಿಂದ ಪಾರಾಗಿರುವ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಭಾರತೀಯ ಅಧಿಕಾರಿಗಳಿಗೆ ನಾಳೆ ಪಾಕಿಸ್ತಾನ ಅವಕಾಶ ನೀಡಿದೆ.
ನಾಳೆ ಕುಲಭೂಷಣ್ ಭೇಟಿಗೆ ಪಾಕ್ ಅವಕಾಶ: ಭಾರತೀಯ ಅಧಿಕಾರಿಗಳಿಂದ ಮಾತುಕತೆ ಸಾಧ್ಯತೆ - ICJ
ಗೂಢಚರ್ಯೆ ಆರೋಪದ ಮೇಲೆ ಪಾಕ್ನಿಂದ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಅಂತಾರಾಷ್ಟ್ರೀಯ ನ್ಯಾಯಾಲಯದ ನೆರವಿನಿಂದ ಸದ್ಯ ಮರಣದಂಡನೆಯಿಂದ ಪಾರಾಗಿದ್ದು, ಅವರನ್ನು ಭೇಟಿಯಾಗಲು ಭಾರತೀಯ ಅಧಿಕಾರಿಗಳಿಗೆ ನಾಳೆ ಪಾಕಿಸ್ತಾನ ಅವಕಾಶ ನೀಡಿದೆ.
ಗೂಢಚರ್ಯೆ ಆರೋಪದ ಮೇಲೆ ಪಾಕ್ನಿಂದ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು. ಅಲ್ಲದೆ, ಭಾರತೀಯ ಅಧಿಕಾರಿಗಳ ಭೇಟಿಗೆ ಅವಕಾಶ ಮಾಡಿಕೊಡಬೇಕೆಂದೂ ನಿರ್ದೇಶನ ನೀಡಿತ್ತು. ಅದರಂತೆ, ನಾಳೆ ಜಾಧವ್ ಭೇಟಿಗೆ ಪಾಕ್ ಅವಕಾಶ ನೀಡಿದೆ.
ಜಾಧವ್ ಅವರಿಗೆ ವಿಧಿಸಲಾದ ಮರಣದಂಡನೆ ಶಿಕ್ಷೆ ಬಗ್ಗೆ ಪರಿಣಾಮಕಾರಿ ಪರಿಶೀಲನೆ ಹಾಗೂ ಪರಿಗಣನೆ ನಡೆಸುವವರೆಗೆ ಅವರನ್ನು ಶಿಕ್ಷಿಸುವಂತಿಲ್ಲ ಎಂದು ಐಸಿಜೆ ಪ್ರಕಟಿಸಿತ್ತು. ಇದು ಭಾರತದ ರಾಜತಾಂತ್ರಿಕತೆಯ ಬಹುದೊಡ್ಡ ಗೆಲುವು ಎಂದೇ ಬಣ್ಣಿಸಲಾಗಿತ್ತು. ಜಾಧವ್ ಅವರನ್ನು ಬಿಡುಗಡೆ ಮಾಡಬೇಕೆಂಬ ಕೋರಿಕೆಯನ್ನು ಭಾರತ ಮುಂದುವರೆಸಿದೆ.