ಇಸ್ಲಾಮಾಬಾದ್ (ಪಾಕಿಸ್ತಾನ): 2019 ಫೆಬ್ರವರಿ 14ರಂದು ಭಾರತದ ಸೈನಿಕರ ಮೇಲೆ ನಡೆದ ಪುಲ್ವಾಮಾ ದಾಳಿ ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರದ ಅತಿ ದೊಡ್ಡ ಸಾಧನೆ ಎಂದು ನ್ಯಾಷನಲ್ ಅಸೆಂಬ್ಲಿಯಲ್ಲಿ ಪಾಕಿಸ್ತಾನ ಮಂತ್ರಿ ಫವಾದ್ ಚೌಧರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಮಂತ್ರಿಯಿಂದಲೇ 'ಉಗ್ರ' ಸತ್ಯ ಬಹಿರಂಗ!
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಲ್ಲಿನ ಸಚಿವನೋರ್ವ ಪ್ರಧಾನಿ ಇಮ್ರಾನ್ ಖಾನ್ ಅವರ ನಿಜ ಸ್ವರೂಪವನ್ನು ಬಯಲು ಮಾಡಿದ್ದಾರೆ. ಪುಲ್ವಾಮಾ ಮೇಲೆ ದಾಳಿ ಮಾಡಿದ್ದೇ ಇಮ್ರಾನ್ ಸರ್ಕಾರದ ಅತಿದೊಡ್ಡ ಸಾಧನೆ ಎಂದು ಪಾಕಿಸ್ತಾನದ ಮುಖವಾಡವನ್ನು ಕಳಚಿದ್ದಾರೆ.
ಪಾಕಿಸ್ತಾನ ಮಂತ್ರಿ ಫವಾದ್ ಚೌಧರಿ
ಮಾಹಿತಿ ಮತ್ತು ಪ್ರಚಾರ ಖಾತೆ ಸಚಿವರಾಗಿರುವ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದು ಮಾತ್ರವಲ್ಲದೆ ಇಂತಹ ನಾಯಕನ ಬಗ್ಗೆ ದೇಶವೇ ಹೆಮ್ಮೆ ಪಡಬೇಕು ಎಂದಿದ್ದು, ಪಾಕಿಸ್ತಾನದ ಭೂ ಪ್ರದೇಶದೊಳಗೆ ಭಾರತ ಅತಿಕ್ರಮಿಸಿತ್ತು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಭಾರತದ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಲು ಕಾರಣವಾದ ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂದು ಸ್ವತಃ ಕಪಟಿ ಪಾಕ್ ಒಪ್ಪಿಕೊಂಡಂತಾಗಿದೆ.
Last Updated : Oct 29, 2020, 8:34 PM IST