ಚಂಡೀಗಢ:ಪಂಜಾಬ್ ರಾಜ್ಯದ ತರ್ನ್ ತರನ್ ಜಿಲ್ಲೆಯಲ್ಲಿ ಸ್ಯಾಟಲೈಟ್ ಫೋನ್, ರೈಫಲ್ ಹಾಗೂ ಒಂದಷ್ಟು ಗ್ರೆನೇಡ್ಗಳು ಪತ್ತೆಯಾಗಿದ್ದು, ಪಾಕಿಸ್ತಾನದಿಂದ ಭಾರತ ಗಡಿ ಪ್ರವೇಶಿಸಿದ್ದ ಡ್ರೋನ್ನಿಂದ ಈ ವಸ್ತುಗಳು ಪತನವಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಪಾಕಿಸ್ತಾನ ಬೇಹುಗಾರಿಕಾ ಇಲಾಖೆ ಐಎಸ್ಐ 26/11 ಮಾದರಿಯಲ್ಲಿ ದಾಳಿಗೆ ಯೋಜನೆ ಸಿದ್ಧಪಡಿಸಿತ್ತು. ಆಧುನಿಕ ತಂತ್ರಜ್ಞಾನದ ಡ್ರೋನ್ ಮೂಲಕ ದಾಳಿ ಪಾಕ್ ಮುಂದಾಗಿತ್ತು.
ಪಂಜಾಬಿನ ತರ್ನ್ ತರನ್ ಜಿಲ್ಲೆ ಪ್ರವೇಶಿಸುವ ವೇಳೆಯಲ್ಲಿ ಡ್ರೋನ್ ತಾಂತ್ರಿಕ ದೋಷದಿಂದ ಡ್ರೋನ್ ಪತನವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಂಜಾಬ್ ಸಿಎಂ ಪ್ರತಿಕ್ರಿಯೆ:
ಘಟನೆಯ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಟ್ವೀಟ್ ಮಾಡಿದ್ದು, ತರ್ನ್ ತರನ್ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದರಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದಿದ್ದಾರೆ. 370ನೇ ವಿಧಿ ರದ್ದತಿ ಬಳಿಕ ಪಾಕಿಸ್ತಾನ ದಾಳಿಗೆ ಯೋಜನೆ ರೂಪಿಸಿದ್ದು ವಿಫಲವಾಗಿದೆ. ಡ್ರೋನ್ ದಾಳಿ ಉಗ್ರರ ಹೊಸ ಪ್ಲಾನ್ ಎಂದಿದ್ದಾರೆ.