ಕರ್ನಾಟಕ

karnataka

ETV Bharat / bharat

ಶಾರದಾ ಪೀಠ ಕಾರಿಡಾರ್​​ಗೆ ಪಾಕ್​ ಗ್ರೀನ್ ಸಿಗ್ನಲ್..!: ಚಿಗರುತ್ತಾ ಬಾಂಧವ್ಯ - ಪಾಕಿಸ್ತಾನ

ಶಾರದಾ ಪೀಠ ಕುಪ್ವಾರದಿಂದ ಕೇವಲ 22 ಕಿ.ಮೀ ದೂರದಲ್ಲಿದೆ. ಈ ಪೀಠ 5,000 ಹಳೆಯ ಇತಿಹಾಸ ಹೊಂದಿದೆ. ಅಶೋಕ ಮಹಾರಾಜ ಇದನ್ನು ಸ್ಥಾಪನೆ ಮಾಡಿದ ಎನ್ನುವ ಐತಿಹ್ಯ ಇದೆ.

ಶಾರದಾ ಪೀಠ

By

Published : Mar 25, 2019, 4:44 PM IST

ಲಾಹೋರ್​: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಹಿಂದೂಗಳ ಪವಿತ್ರ ಸ್ಥಳ ಶಾರದಾ ಪೀಠಕ್ಕೆ ಕಾರಿಡಾರ್ ಕಲ್ಪಿಸಲು ಪಾಕಿಸ್ತಾನ ಹಸಿರು ನಿಶಾನೆ ತೋರಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಈಗಾಗಲೇ ಭಾರತೀಯ ವಿದೇಶಾಂಗ ಸಚಿವಾಲಯ ಶಾರದಾ ಪೀಠಕ್ಕೆ ಸಂಪರ್ಕ ಕಲ್ಪಿಸಲು ಸಾಕಷ್ಟು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಸದ್ಯ ಪರಿಗಣಿಸಿರುವ ಇಮ್ರಾನ್ ಖಾನ್ ಸರ್ಕಾರ ಕೆಲ ದಿನಗಳಲ್ಲಿ ಈ ಕುರಿತಾಗಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಶಾರದಾ ಪೀಠ

ಶಾರದಾ ಪೀಠ ಕುಪ್ವಾರದಿಂದ 22 ಕಿ.ಮೀ ದೂರದಲ್ಲಿದೆ. ಈ ಪೀಠ 5,000 ಹಳೆಯ ಇತಿಹಾಸ ಹೊಂದಿದೆ. ಅಶೋಕ ಮಹಾರಾಜ ಇದನ್ನು ಸ್ಥಾಪನೆ ಮಾಡಿದ ಎನ್ನುವ ಐತಿಹ್ಯ ಇದೆ.

1947ರ ತನಕ ಹಿಂದೂಗಳು ಈ ಪೀಠಕ್ಕೆ ಭೇಟಿ ನೀಡುತ್ತಿದ್ದರು. ಆ ಬಳಿಕ ಈ ಜಾಗ ಪಾಕಿಸ್ತಾನ ಆಕ್ರಮಿಸಿಕೊಂಡ ನಂತರ ಹಿಂದೂಗಳ ಭೇಟಿ ನಿಂತು ಹೋಗಿತ್ತು.

ABOUT THE AUTHOR

...view details