ಕರಾಚಿ: ತನ್ನ ವಶದಲ್ಲಿದ್ದ ಭಾರತದ 100 ಮೀನುಗಾರರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಿದೆ. ಈ ಮೂಲಕ ಕೆಲ ವಾರಗಳಲ್ಲಿ 300 ಮೀನುಗಾರರನ್ನು ಪಾಕ್ ಬಂಧಮುಕ್ತಗೊಳಿಸಿದಂತಾಗಿದೆ.
ಭಾರತದ 100 ಮೀನುಗಾರರಿಗೆ ಪಾಕ್ನಿಂದ ಬಂಧಮುಕ್ತಿ.. ಇನ್ನೂ 60 ಮೀನುಗಾರರು ರಿಲೀಸ್ ಆಗಬೇಕಿದೆ - etv bharat
ಮೂರನೇ ಬ್ಯಾಚ್ನಲ್ಲಿ ಭಾರತದ 100 ಮೀನುಗಾರರನ್ನು ಬಿಡುಗಡೆ ಮಾಡಿದ ಪಾಕ್. ಸೋಮವಾರ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಮೀನುಗಾರರನ್ನ ಹಸ್ತಾಂತರಿಸಿದೆ.
ಅರಬ್ಬಿ ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ಹಿನ್ನೆಲೆಯಲ್ಲಿ ಭಾರತದ ಮೀನುಗಾರರು ಪಾಕ್ ಬಂಧಿಸಿತ್ತು. ಇದೀಗ ಆ ಮೀನುಗಾರರನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತಿದೆ.
360 ಮೀನುಗಾರರನ್ನ ಬಿಡುಗಡೆ ಮಾಡುವುದಾಗಿ ಪಾಕ್ ವಾಗ್ದಾನ ಮಾಡಿತ್ತು. ಅಂತೆಯೇ ಕಳೆದ ಕೆಲ ದಿನಗಳ ಹಿಂದೆ ಕರಾಚಿಯಿಂದ ಎರಡು ಬ್ಯಾಚ್ಗಳಲ್ಲಿ ತಲಾ 100 ಮೀನುಗಾರರನ್ನು ರಿಲೀಸ್ ಮಾಡಿದೆ. ಇದೀಗ ಮತ್ತೆ 100 ಮೀನುಗಾರರನ್ನು ತಾಯ್ನಾಡಿಗೆ ವಾಪಸ್ ಕಳಿಸಿದೆ.
ಪೊಲೀಸ್ ಭದ್ರತೆಯಲ್ಲಿ 100 ಮೀನುಗಾರರನ್ನು ಕರೆದೊಯ್ದು ವಾಘಾ-ಅಟಾರಿ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಲಿದ್ದೇವೆ ಎಂದು ಈಧಿ ಫೌಂಡೇಷನ್ನ ಮುಖ್ಯಸ್ಥರು ಹೇಳಿದ್ದಾರೆ.