ಕರ್ನಾಟಕ

karnataka

ETV Bharat / bharat

ಉಗ್ರ ಮಸೂದ್​ ಅಜರ್​ ಮನೆ ಬಿಟ್ಟು ಬರಲಾಗದಷ್ಟು ಅಸ್ವಸ್ಥ... ವಿದೇಶಿ ಮಾಧ್ಯಮಕ್ಕೂ ಸುಳ್ಳುಹೇಳಿದ ಪಾಕ್​ - ಪಾಕ್​ ವಿದೇಶಾಂಗ ಸಚಿವ ಶಾ ಮೆಹಮ್ಮೊದ್​ ಖುರೇಷಿ

ಜೈಷೆ ಮೊಹಮ್ಮದ್​ನ ಮುಖ್ಯಸ್ಥ ಮಸೂದ್​ ಅಜರ್ ತೀವ್ರ ಅಸ್ವಸ್ಥನಾಗಿದ್ದಾನೆ ಎಂದು ಪಾಕ್​ ವಿದೇಶಾಂದಗ ಸಚಿವ ಶಾ ಮೆಹಮ್ಮೊದ್​ ಖುರೇಷಿ ಹೇಳಿದ್ದಾರೆ

ಉಗ್ರ ಮಸೂದ್​ ಅಜರ್​ ಅಸ್ವಸ್ಥನಾಗಿದ್ದಾನೆ ಎಂದು ಪಾಕ್​ ಹೇಳಿದೆ

By

Published : Mar 1, 2019, 1:30 PM IST

ಇಸ್ಲಾಮಾಬಾದ್​: ಪುಲ್ವಾಮ ದಾಳಿಯ ಸೂತ್ರದಾರ ಜೈಷೆ ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಮನೆ ಬಿಟ್ಟು ಹೊರ ಬರಲಾರದಷ್ಟು ನಾಗಿದ್ದಾನೆ ಎಂದು ಪಾಕ್​ ವಿದೇಶಾಂದಗ ಸಚಿವ ಶಾ ಮೆಹಮ್ಮೊದ್​ ಖುರೇಷಿ ಸುಳ್ಳು ಹೇಳಿದ್ದಾರೆ.

ಸಿಎನ್​ಎನ್​ ವಾಹಿನಿ ಜತೆ ಮಾತನಾಡಿರುವ ಖುರೇಷಿ, ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿರುವ ಮಸೂದ್​ ಅಜರ್​ ತೀವ್ರ ಅಸ್ವಸ್ಥನಾಗಿದ್ದಾನೆ. ಆತ ಮನೆ ಬಿಟ್ಟು ಹೊರ ಬರಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ವಾಹಿನಿಯ ಪ್ರತಿನಿಧಿ ಕ್ರಿಶ್ಚಿಯನ್​ ಅಮನ್​ಪೋರ್​ ಅವರು, ಮಸೂದ್ ಅಜರ್​ ಪಾಕಿಸ್ತಾನದಲ್ಲಿರುವುದು ಹೌದೇ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಖುರೇಷಿ, ನನ್ನ ಮಾಹಿತಿಗಳ ಪ್ರಕಾರ ಆತ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಹೇಳಿದರು.

ವಿಶ್ವಸಂಸ್ಥೆಯು ಉಗ್ರ ಪಟ್ಟ ನೀಡಿರುವ ಮಸೂದ್​ ಪಾಕಿಸ್ತಾನದಲ್ಲೇ ಇದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಖುರೇಷಿ, ಆತ ಮನೆಯಿಂದ ಹೊರ ಬರಲಾರದಷ್ಟು ಅಸ್ವಸ್ಥನಾಗಿದ್ದಾನೆ ಎಂದು ಹೇಳಿದ್ದಾರೆ.

ಭಾರತದ ಜತೆ ಮಾತುಕತೆಗೆ ನಾವು ಸದಾ ಸಿದ್ದ, ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಖುರೇಷಿ ತಿಳಿಸಿದರು.

ABOUT THE AUTHOR

...view details