ಕರ್ನಾಟಕ

karnataka

ETV Bharat / bharat

'ಜಮ್ಮು-ಕಾಶ್ಮೀರ ಭಾರತದ ರಾಜ್ಯ'... ವಿಶ್ವಸಂಸ್ಥೆಯಲ್ಲೇ ಹೇಳಿಕೆ ನೀಡಿದ ಪಾಕ್​ ವಿದೇಶಾಂಗ ಸಚಿವ! - ಆರ್ಟಿಕಲ್​ 370

ಜಮ್ಮು-ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಖ್ಯಾತೆ ತೆಗೆದಿರುವ ನೆರೆಯ ಪಾಕ್​ ಕೊನೆಗೂ ಅದು ಭಾರತದ ರಾಜ್ಯ ಎಂಬ ಮಾತನ್ನು ಒಪ್ಪಿಕೊಂಡಿದ್ದು, ಈ ವಿಚಾರವಾಗಿ ಅಲ್ಲಿನ ವಿದೇಶಾಂಗ ಸಚಿವ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ

By

Published : Sep 10, 2019, 6:13 PM IST

Updated : Sep 10, 2019, 11:33 PM IST

ಜಿನೀವಾ(ಸ್ವಿಟ್ಜರ್ಲ್​​ಲ್ಯಾಂಡ್​​):ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370 ರದ್ಧುಗೊಂಡ ಬಳಿಕ ಭಾರತದ ಮೇಲೆ ವಾಗ್ದಾಳಿ ನಡೆಸುತ್ತಿರುವ ಪಾಕ್​ ಇದೀಗ ವಿಶ್ವಸಂಸ್ಥೆಯಲ್ಲೂ ಇದೇ ವಿಷಯವ ಮಾತನಾಡಲು ಮುಂದಾಗಿದೆ.

ಇದೇ ವಿಷಯ ಮಾತನಾಡಲು ಜಿನೇವಾಗೆ ತೆರಳಿರುವ ಪಾಕ್​ನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ‘ಇಂಡಿಯನ್ ಸ್ಟೇಟ್ ಆಫ್ ಕಾಶ್ಮೀರ್’ ಎಂದು ಹೇಳಿಕೆ ನೀಡಿದ್ದಾರೆ.

ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ

ಸುದ್ದಿಗಾರರ ಜತೆ ಮಾತನಾಡುತ್ತಿದ್ದಾಗ ಖುರೇಷಿ, ಜಮ್ಮು-ಕಾಶ್ಮೀರದಲ್ಲಿ ನಿಷೇಧಾಜ್ಞೆ ಹಿಂಪಡೆಯುವ ಮೂಲಕ ಪರಿಸ್ಥಿತಿ ಶಾಂತವಾಗಿದೆ ಎಂದು ಭಾರತದ ನಾಟಕ ಮಾಡುತ್ತಿದೆ. ಕಾಶ್ಮೀರದಲ್ಲಿ ನಿಜಕ್ಕೂ ಪರಿಸ್ಥಿತಿ ಸಹಜವಾಗಿದ್ದರೆ, ಅಂತಾರಾಷ್ಟ್ರೀಯ ಮಾಧ್ಯಮ, ಸಂಘ ಸಂಸ್ಥೆಗಳಿಗೆ ಕಾಶ್ಮೀರ ಭೇಟಿಗೆ ಅವಕಾಶ ಏಕೆ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಜಿನೇವಾದಲ್ಲಿ ಇದೀಗ ವಿಶ್ವಸಂಸ್ಥೆ ಮಾನವಹಕ್ಕು ಮಂಡಳಿಯ 42ನೇ ಅಧಿವೇಶನ ನಡೆಯುತ್ತಿದ್ದು, ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭಾಗಿಯಾಗಿದ್ದಾರೆ. ಅವರ ನೀಡಿರುವ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಕೊನೆಗೂ ಅವರ ಬಾಯಿಂದ ಸತ್ಯಾಂಶ ಹೊರಬಿದ್ದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ವಿಶ್ವಸಂಸ್ಥೆಯಲ್ಲೂ ಇದೇ ವಿಷಯವಾಗಿ ಚರ್ಚೆ ನಡೆದಿದ್ದು, ಪಾಕಿಸ್ತಾನ ಜಮ್ಮು-ಕಾಶ್ಮೀರವಾಗಿ ತನ್ನ ವಾದ ಮಂಡನೆ ಮಾಡ್ತು. ಆರ್ಟಿಕಲ್​ 370 ರದ್ದುಗೊಳಿಸಿದ ಬಳಿಕ ಕಣಿವೆ ನಾಡಿನಲ್ಲಿ ಶಾಂತಿ ಹದಗೆಟ್ಟಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿತ್ತು. ಇದಕ್ಕೆ ತಿರುಗೇಟು ನೀಡಿದ ಭಾರತ, ಇಡೀ ವಿಶ್ವಕ್ಕೆ ಗೊತ್ತಿದೆ.ಪಾಕ್​ನಿಂದ ಉಗ್ರವಾದ ಉದ್ಭವವಾಗುತ್ತಿದೆ ಎಂಬುದು. ಸುಳ್ಳು ಮಾಹಿತಿ ನೀಡಿ ವಿಶ್ವದ ಗಮನ ತನ್ನತ್ತ ಸೆಳೆಯಲು ಅದು ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿತ್ತು. ಭಾರತದ ವಿದೇಶಾಗ ಕಾರ್ಯದರ್ಶಿ ವಿಜಯ್​ ಠಾಕೂರ್​ ಸಿಂಗ್​​ ಸೂಕ್ಷವಾಗಿ ಪಾಕ್​ಗೆ ತಿರುಗೇಟು ನೀಡಿ, ತಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಹೇಳಿತ್ತು.

Last Updated : Sep 10, 2019, 11:33 PM IST

ABOUT THE AUTHOR

...view details