ಶ್ರೀನಗರ (ಜಮ್ಮು ಕಾಶ್ಮೀರ):ಪಾಕಿಸ್ತಾನ ಸೈನಿಕರು ಭಾರತದ ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಮ್ಮೆ ಕ್ಯಾತೆ ತೆಗೆಯುತ್ತಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೈನಿಕರ ಪೋಸ್ಟ್ ಮತ್ತು ಗ್ರಾಮಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಮೂಲಗಳು ಭಾನುವಾರ ಮಾಹಿತಿ ನೀಡಿವೆ.
ಶನಿವಾರ ರಾತ್ರಿ ಹಿರಾನಗರ ಸೆಕ್ಟರ್‌ನ ಪನ್ಸಾರ್ ಗಡಿ ಪ್ರದೇಶದ ಉದ್ದಕ್ಕೂ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಗುಂಡಿನ ದಾಳಿ ಪ್ರಾರಂಭಿಸಲಾಗಿದ್ದು, ಪಾಕ್ ಸೇನೆಯ ಕ್ರಮಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಲವಾದ ಪ್ರತೀಕಾರ ತೋರಿದೆ.