ನವದೆಹಲಿ:ಇಸ್ಲಾಮಾಬಾದ್‌ನಲ್ಲಿ ಭಾರತೀಯ ಹೈಕಮಿಷನ್‌ನ ಆ್ಯಕ್ಟಿಂಗ್ ಹೆಡ್ ಆಗಿ ನೇಮಕಗೊಳ್ಳಲಿದ್ದ ಹಿರಿಯ ರಾಜತಾಂತ್ರಿಕ ಜಯಂತ್ ಖೋಬ್ರಗಡೆ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಅವರು ಈ ಹುದ್ದೆಗೆ ತುಂಬಾ ಹಿರಿಯರು ಎಂಬ ಕಾರಣಕ್ಕೆ ಪಾಕಿಸ್ತಾನ ಅವರ ವೀಸಾವನ್ನು ಅನುಮೋದಿಸಿಲ್ಲ ಎಂದು ತಿಳಿದು ಬಂದಿದೆ. ಖೋಬ್ರಗಡೆ ಅವರನ್ನು ಭಾರತದ ಉಪ ಹೈಕಮಿಷನರ್ ಆಗಿ ಪಾಕ್ಗೆ ಕಳುಹಿಸುವ ಬಗ್ಗೆ ಜೂನ್‌ನಲ್ಲೇ ಭಾರತ ತಿಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.