ನವದೆಹಲಿ/ಇಸ್ಲಮಾಬಾದ್: ವಾರದ ಬಳಿಕ ಅಮೆರಿಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನ ನಿರಾಕರಿಸಿದೆ.
ಈ ಬಗ್ಗೆ ಭಾರತೀಯ ಹೈಕಮಿಷನ್ಗೆ ಮಾಹಿತಿ ರವಾನಿಸಿರುವ ಪಾಕ್ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ, ಮೋದಿಯ ವಿಮಾನಕ್ಕೆ ನಮ್ಮ ವಾಯು ಪ್ರದೇಶ ಬಳಕೆಗೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಾರದ ಬಳಿಕ ಪ್ರಧಾನಿ ಮೋದಿ ಅಮೆರಿಕ ತೆರಳಲಿರುವುದರಿಂದ, ತಮ್ಮ ವಾಯು ಪ್ರದೇಶವನ್ನು ಬಳಸುವುದಾಗಿ ರಾಷ್ಟ್ರ ರಾಜಧಾನಿಯಿಂದ ಇಸ್ಲಮಾಬಾದ್ಗೆ ಔಪಚಾರಿಕ ಮನವಿ ಸಲ್ಲಿಸಲಾಗಿತ್ತು.
ಆರ್ಟಿಕಲ್ 370ರ ರದ್ಧತಿ ಬಳಿಕ, ಭಾರತದ ನಡೆ ಬಗ್ಗೆ ತಲೆಕೆಡಿಸಿಕೊಂಡಿರುವ ಪಾಕಿಸ್ಥಾನ, ಈ ಮೊದಲು ಐಸ್ಲ್ಯಾಂಡ್ಗೆ ತೆರಳುತ್ತಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಿಮಾನಕ್ಕೂ ವಾಯು ಪ್ರದೇಶದ ಬಳಕೆಗೆ ಪಾಕ್ ವಿರೋಧಿಸಿತ್ತು.