ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಪಾಕ್​​​​ ಸೇನೆಯಿಂದ ಮುಂದುವರೆದ ಕದನ ವಿರಾಮ ಉಲ್ಲಂಘನೆ - ಎಲ್​ಒಸಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ

ಬೆಳಿಗ್ಗೆ 6:45ರ ಸುಮಾರಿಗೆ ಪೂಂಚ್​ ಜಿಲ್ಲೆಯ ಬಾಲಕೋಟ್​ ಮತ್ತು ಮೆಂದಹಾರ್​ ಬಳಿ ಲಘು ಶಸ್ತ್ರಾಸ್ತ್ರಗಳೊಂದಿಗೆ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.

Pakistan continues to violate ceasefire on J and K LoC
ಪಾಕಿಸ್ತಾನ ಸೇನೆಯಿಂದ ಮುಂದುವರೆದ ಕದನ ವಿರಾಮ ಉಲ್ಲಂಘನೆ

By

Published : Sep 17, 2020, 10:33 AM IST

ಜಮ್ಮು-ಕಾಶ್ಮೀರ: ಪೂಂಚ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್​ಒಸಿ) ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡು ಮತ್ತು ಶೆಲ್ ದಾಳಿ ಮುಂದುವರೆಸಿದೆ.

ಬೆಳಿಗ್ಗೆ 6:45ರ ಸುಮಾರಿಗೆ ಪೂಂಚ್​ ಜಿಲ್ಲೆಯ ಬಾಲಕೋಟ್​ ಮತ್ತು ಮೆಂದಹಾರ್​ ಬಳಿ ಲಘು ಶಸ್ತ್ರಾಸ್ತ್ರಗಳೊಂದಿಗೆ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸಿದೆ. ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ತಿಳಿಸಿದ್ದಾರೆ.

ಪಾಕಿಸ್ತಾನ ಈ ವರ್ಷದ ಆರಂಭದಿಂದಲೂ ಸತತ ದಾಳಿ ನಡೆಸುವ ಮೂಲಕ 1999ರ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಕಳೆದ ಮಂಗಳವಾರ ಜಮ್ಮು-ಕಾಶ್ಮೀರದ ಸುಂದರ್​​ಬನಿ ಸೆಕ್ಟರ್​ನಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿತ್ತು. ಈ ವೇಳೆ ಯೋಧ ನಾಯಕ್​ ಅನೀಶ್​ ಥಾಮಸ್​ ಹುತಾತ್ಮರಾಗಿದ್ದರು.

ಪಾಕಿಸ್ತಾನ ಸೇನೆಯು ರಾಜೌರಿ ಜಿಲ್ಲೆಯ ಸುಂದರ್‌ಬನಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿದೆ. ನಮ್ಮ ಸೇನೆಯು ಇದಕ್ಕೆ ತಕ್ಕ ಪ್ರತ್ಯುತ್ತರ ಕೊಟ್ಟಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಾಯಕ್ ಅನೀಶ್ ಥಾಮಸ್ ಮೃತಪಟ್ಟಿದ್ದಾರೆ ಎಂದು ಸೇನೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರ್ಷದ ಜನವರಿಯಿಂದ ಪಾಕಿಸ್ತಾನವು ಎಲ್‌ಒಸಿಯಲ್ಲಿ 3,186ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಇದರಲ್ಲಿ 24 ನಾಗರಿಕರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ABOUT THE AUTHOR

...view details