ಕರ್ನಾಟಕ

karnataka

ETV Bharat / bharat

ಎಫ್‌ಎಟಿಎಫ್‌ ಕಪ್ಪುಪಟ್ಟಿ ಆತಂಕದಿಂದ ದೂರ ಉಳಿದ ಪಾಕ್‌ : ಸದ್ಯಕ್ಕೆ ಗ್ರೇ ಪಟ್ಟಿಯಲ್ಲೇ ಪಾಕ್‌ಗೆ ಸ್ಥಾನ

ಪ್ಯಾರಿಸ್‌ನಲ್ಲಿ ನಡೆದ ಮೂರು ದಿನಗಳ ಸಭೆಯನ್ನು ಮುಕ್ತಾಯಗೊಳಿಸಿದ ವಿಶ್ವಸಂಸ್ಥೆ ನೇತೃತ್ವದ ಸಮಗ್ರ ಸಮಿತಿ, ‘ಪಾಕಿಸ್ತಾನವು 27 ಕ್ರಿಯಾಶೀಲ ಯೋಜನೆಗಳ ಪೈಕಿ 14 ಕಾರ್ಯಗಳನ್ನು ಪರಿಹರಿಸಿದೆ, ಉಳಿದ ಕ್ರಿಯಾ ಯೋಜನೆಯ ಮೇಲೆ ವಿವಿಧ ಹಂತದ ಪ್ರಗತಿಯನ್ನು ಹೊಂದಿದೆ’ ಎಂದು ಹೇಳಿದೆ. ಆದಾಗ್ಯೂ, ಸಂಭವನೀಯ ಕಪ್ಪುಪಟ್ಟಿಯಿಂದ ದೂರವಿರಲು ಬಯಸಿದರೆ, ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲಾ 27 ನಿಯಮಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ.

pakistan-came-out-from-the-fatf-blacklist-pak-currently-ranked-gray-on-the-list
ಗ್ರೇ ಪಟ್ಟಿಯಲ್ಲಿ ಪಾಕ್‌ಗೆ ಸ್ಥಾನ

By

Published : Feb 23, 2020, 3:21 PM IST

ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಕುರಿತಾದ ಇಸ್ಲಾಂಬಾದ್‌ನ ವಾದ ಮತ್ತು ಭಯೋತ್ಪಾದಕ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ವಿರುದ್ಧದ ಇತ್ತೀಚಿನ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ಜಾಗತಿಕ ಕಾವಲುಗಾರ ಎಫ್‌ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಪಾಕಿಸ್ತಾನವನ್ನು ಗ್ರೇ ಪಟ್ಟಿಯಲ್ಲಿ ಉಳಿಸಿಕೊಂಡಿದೆ. ಪ್ಯಾರಿಸ್‌ನಲ್ಲಿ ನಡೆದ ಮೂರು ದಿನಗಳ ಸಭೆಯನ್ನು ಮುಕ್ತಾಯಗೊಳಿಸಿದ ವಿಶ್ವಸಂಸ್ಥೆ ನೇತೃತ್ವದ ಸಮಗ್ರ ಸಮಿತಿ, ‘ಪಾಕಿಸ್ತಾನವು 27 ಕ್ರಿಯಾಶೀಲ ಯೋಜನೆಗಳ ಪೈಕಿ 14 ಕಾರ್ಯಗಳನ್ನು ಪರಿಹರಿಸಿದೆ, ಉಳಿದ ಕ್ರಿಯಾ ಯೋಜನೆಯ ಮೇಲೆ ವಿವಿಧ ಹಂತದ ಪ್ರಗತಿಯನ್ನು ಹೊಂದಿದೆ’ ಎಂದು ಹೇಳಿದೆ. ಆದಾಗ್ಯೂ, ಸಂಭವನೀಯ ಕಪ್ಪುಪಟ್ಟಿಯಿಂದ ದೂರವಿರಲು ಬಯಸಿದರೆ, ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲಾ 27 ನಿಯಮಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿದೆ. “ಜೂನ್ 2020ರ ವೇಳೆಗೆ ಪಾಕಿಸ್ತಾನ ತನ್ನ ಪೂರ್ಣ ಕ್ರಿಯಾ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಎಫ್‌ಎಟಿಎಫ್ ಬಲವಾಗಿ ಒತ್ತಾಯಿಸುತ್ತದೆ. ಟಿಎಫ್‌ ಸಂಬಂಧಿತ(ಭಯೋತ್ಪಾದಕ ಹಣಕಾಸು) ವಿಚಾರಣೆ ಮತ್ತು ದಂಡ ವಿಧಿಸುವಲ್ಲಿ ಮಹತ್ವದ ಮತ್ತು ಸುಸ್ಥಿರ ಪ್ರಗತಿಯನ್ನು ಹೊಂದಿರಬೇಕು, ಇಲ್ಲದಿದ್ದರೆ ಮುಂದಿನ ಸಭೆಯಲ್ಲಿ ಎಫ್‌ಎಟಿಎಫ್ ಕ್ರಮ ತೆಗೆದುಕೊಳ್ಳುತ್ತದೆ, ಅದು ಕ್ರಮ ತೆಗೆದುಕೊಳ್ಳುವುದು ಮತ್ತು ಎಫ್‌ಎಟಿಎಫ್ ತನ್ನ ಸದಸ್ಯರನ್ನು ಕರೆಸಿಕೊಂಡು ಪಾಕಿಸ್ತಾನದೊಂದಿಗಿನ ವ್ಯವಹಾರ ಸಂಬಂಧಗಳು ಮತ್ತು ವಹಿವಾಟುಗಳಿಗೆ ವಿಶೇಷ ಗಮನ ನೀಡುವಂತೆ ತಮ್ಮ ಎಫ್‌ಐಐಗಳಿಗೆ (ಹಣಕಾಸು ಸಂಸ್ಥೆಗಳು) ಎಲ್ಲ ನ್ಯಾಯವ್ಯಾಪ್ತಿಯಲ್ಲಿ ಒತ್ತಾಯಿಸಿ, ಸಲಹೆ ನೀಡುವುದನ್ನು ಒಳಗೊಂಡಿರುತ್ತದೆ ” ಎಂದು ಎಫ್‌ಎಟಿಎಫ್ ಅಧ್ಯಕ್ಷರ ವರದಿ ಹೇಳಿದೆ.

ಪ್ರಸ್ತುತ ಕಪ್ಪು ಪಟ್ಟಿಯಿಂದ ಹೊರಬರಲು ಪಾಕಿಸ್ತಾನ ಆಶಿಸುತ್ತಿದ್ದ ಸಭೆಯಲ್ಲಿ 205 ದೇಶಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ನ್ಯಾಯವ್ಯಾಪ್ತಿಗಳನ್ನು ಪ್ರತಿನಿಧಿಸುವ 800 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಗ್ರೇ ಪಟ್ಟಿಯಿಂದ ಹೊರಬರಲು ಬೇಕಾದ 39 ಮತಗಳಲ್ಲಿ 14 ಮತಗಳನ್ನು ಪಡೆಯಲು ಪಾಕಿಸ್ತಾನ ವಿಫಲವಾಗಿದೆ. ಆದರೆ ಇಸ್ಲಾಮಾಬಾದ್‌ಗೆ ಬೆಂಬಲವಾಗಿ ನಿಂತಿರುವ ಚೀನಾ, ಮಲೇಷ್ಯಾ, ಟರ್ಕಿಯಂತಹ ದೇಶಗಳೊಂದಿಗೆ ಕಪ್ಪುಪಟ್ಟಿಗೆ ವೀಟೋ ಮಾಡಲು ಕನಿಷ್ಠ ಮೂರು ಮತಗಳನ್ನು ಹೊಂದಿದೆ. ಮೂಲಗಳ ಪ್ರಕಾರ, ಈ ಸಭೆಯಲ್ಲಿ ಹೆಚ್ಚಿನ ಪಾಲುದಾರರು ಈ ಬಾರಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವ ಬದಲು ಮುಂದಿನ ಸಮಗ್ರ ಅಧಿವೇಶನದವರೆಗೆ ಗ್ರೇ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಒಲವು ತೋರಿದ್ದಾರೆ.

ಜೂನ್ 2018 ರಿಂದ, ಪಾಕಿಸ್ತಾನವು ಭಯೋತ್ಪಾದಕ ಹಣಕಾಸು ಪೂರೈಕೆ ಕಡಿವಾಣಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಬಲಪಡಿಸಲು ಮತ್ತು ಭಯೋತ್ಪಾದಕರು ಮತ್ತು ಅವರ ಸಂಸ್ಥೆಗಳಿಂದ ಹಣ ವರ್ಗಾವಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಎಫ್‌ಎಟಿಎಫ್ ಮತ್ತು ಅದರ ಉಪ ಗುಂಪು ಎಪಿಜಿ (ಏಷ್ಯಾ ಪ್ಲೆನರಿ ಗ್ರೂಪ್) ನೊಂದಿಗೆ ಕೆಲಸ ಮಾಡುವಲ್ಲಿ ಉನ್ನತ ಮಟ್ಟದ ರಾಜಕೀಯ ಬದ್ಧತೆ ತೋರಿದೆ. 'ಎಎಮ್ಎಲ್ (ಅಕ್ರಮ ಹಣ ವರ್ಗಾವಣೆ ವಿರೋಧಿ) / ಸಿಎಫ್‌ಟಿ (ಭಯೋತ್ಪಾದನೆಯ ಹಣಕಾಸು ವಿರುದ್ಧ ಹೋರಾಟ) ಉಲ್ಲಂಘನೆ ಪ್ರಕರಣಗಳಲ್ಲಿ ಪರಿಹಾರ ಕ್ರಮಗಳು ಮತ್ತು ನಿರ್ಬಂಧಗಳನ್ನು ಅನ್ವಯಿಸಲಾಗಿದೆ' ಎಂದು ಸಾಬೀತುಪಡಿಸಲು ಎಫ್‌ಎಟಿಎಫ್ ಇಂದು ಪಾಕಿಸ್ತಾನವನ್ನು ಕೇಳಿದೆ, “ಅಕ್ರಮ ಹಣ ಅಥವಾ ಮೌಲ್ಯ ವರ್ಗಾವಣೆ ಸೇವೆಗಳನ್ನು ಗುರುತಿಸಲು ಮತ್ತು ಅದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಮತ್ತು ಸಮರ್ಥರಾಗಿ ಕ್ರಮ ಜರುಗಿಸುತ್ತಿದ್ದಾರೆ” ಎಂದು ಸಾಬೀತುಪಡಿಸಲು ಕೇಳಿದೆ. ಔಪಚಾರಿಕ ಹೇಳಿಕೆಯು ಪಾಕಿಸ್ತಾನಕ್ಕೆ ಕಾನೂನು ಜಾರಿ ಸಂಸ್ಥೆಗಳು (ಎಲ್‌ಇಎ) ವ್ಯಾಪಕ ಶ್ರೇಣಿಯ ಭಯೋತ್ಪಾದಕ ಹಣಕಾಸು ಚಟುವಟಿಕೆಗಳನ್ನು ಗುರುತಿಸಿ ತನಿಖೆ ನಡೆಸುತ್ತಿವೆ ಮತ್ತು ಗೊತ್ತುಪಡಿಸಿದ ವ್ಯಕ್ತಿಗಳು ಮತ್ತು ಘಟಕಗಳ ಮೇಲೆ ಕಾನೂನು ಕ್ರಮ ಜರುಗಿಸುತ್ತಿದೆ ಮತ್ತು ಗೊತ್ತುಪಡಿಸಿದ ವ್ಯಕ್ತಿಗಳು ಅಥವಾ ಘಟಕಗಳ ಪರವಾಗಿ ಅಥವಾ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದನ್ನು ಸಾಬೀತುಪಡಿಸಲು ಕೇಳಿದೆ.

ಭದ್ರತಾ ಮಂಡಳಿಯ 1267 ಮತ್ತು 1373 ರ ನಿರ್ಣಯಗಳ ಅಡಿಯಲ್ಲಿ ಗೊತ್ತುಪಡಿಸಿದ ಎಲ್ಲಾ ಭಯೋತ್ಪಾದಕರ ವಿರುದ್ಧ ಮತ್ತು ಅವರ ಪರವಾಗಿ ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸುವವರ ವಿರುದ್ಧ, ಉದ್ದೇಶಿತ ಆರ್ಥಿಕ ನಿರ್ಬಂಧಗಳ (ಸಮಗ್ರ ಕಾನೂನು ಬಾಧ್ಯತೆಯಿಂದ ಬೆಂಬಲಿತವಾಗಿದೆ) ಪರಿಣಾಮಕಾರಿಯಾದ ಅನುಷ್ಠಾನವನ್ನು ಪ್ರದರ್ಶಿಸಲು ವಿಶ್ವಸಂಸ್ಥೆಯ ಘಟಕವು ಇಸ್ಲಾಮಾಬಾದ್ ಅನ್ನು ಕಟ್ಟುನಿಟ್ಟಾಗಿ ಕೇಳಿದೆ. ನಿಧಿಗಳ ಹರಿವು, ಸ್ವತ್ತುಗಳನ್ನು ಗುರುತಿಸುವುದು ಮತ್ತು ಘನೀಕರಿಸುವುದು (ಚಲಿಸಬಲ್ಲ ಮತ್ತು ಸ್ಥಿರ), ಮತ್ತು ನಿಧಿಗಳು ಮತ್ತು ಹಣಕಾಸು ಸೇವೆಗಳಿಗೆ ಪ್ರವೇಶವನ್ನು ನಿಷೇಧಿಸುವುದನ್ನು ಖಾತ್ರಿ ಪಡಿಸುವಂತೆ ಸೂಚಿಸಿದೆ.

“ಕ್ರಿಯಾ ಯೋಜನೆಯಲ್ಲಿನ ಎಲ್ಲಾ ಗಡುವಿನ ಅವಧಿ ಮುಗಿದಿದೆ. ಇತ್ತೀಚಿನ ಮತ್ತು ಗಮನಾರ್ಹ ಸುಧಾರಣೆಗಳನ್ನು ಗಮನಿಸುವಾಗ, ಒಪ್ಪಿದ ಕಾಲಮಿತಿಗಳಿಗೆ ಅನುಗುಣವಾಗಿ ಮತ್ತು ನ್ಯಾಯವ್ಯಾಪ್ತಿಯಿಂದ ಭಯೋತ್ಪಾದಕ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಹಣಕಾಸು ವರ್ಗಾವಣೆ ನಿಯಂತ್ರಣದಲ್ಲಿ ಪಾಕಿಸ್ತಾನವು ತನ್ನ ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸಲು ವಿಫಲವಾದ ಕಾರಣ ಎಫ್‌ಎಟಿಎಫ್ ಮತ್ತೆ ಕಳವಳ ವ್ಯಕ್ತಪಡಿಸುತ್ತದೆ ”ಎಂದು ಎಫ್‌ಎಟಿಎಫ್ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಈ ಮೊದಲು ಯುಎನ್‌ಎಸ್‌ಸಿ ಗೊತ್ತುಪಡಿಸಿದ ಭಯೋತ್ಪಾದಕ ಗುಂಪುಗಳಾದ ತಾಲಿಬಾನ್, ಅಲ್-ಖೈದಾ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಹಣಕಾಸು ಮತ್ತು ಬ್ಯಾಂಕಿಂಗ್ ಪ್ರವೇಶವನ್ನು 2019 ರ ಸೆಪ್ಟೆಂಬರ್ ವೇಳೆಗೆ ಸ್ಥಗಿತಗೊಳಿಸುವಂತೆ ಪಾಕಿಸ್ತಾನವನ್ನು ಕೇಳಲಾಗಿತ್ತು.

ಪಾಕಿಸ್ತಾನವು ವಿಶ್ವ ಸಂಸ್ಥೆಯ ಘಕಟದೊಂದಿಗೆ ಸಹಕರಿಸುತ್ತಿದೆ, ಪ್ರಗತಿಯನ್ನು ದಾಖಲಿಸಿದೆ, ಅಧಿಕಾರಿಗಳನ್ನು ತೊಡಗಿಸಿಕೊಂಡಿದೆ ಮತ್ತು ಅನುಸರಣೆ ಕ್ರಮವನ್ನು ನವೀಕರಿಸಿದೆ ಎಂದು ವಾದಿಸುತ್ತಿದೆ ಮತ್ತು ಆದ್ದರಿಂದ ಕಪ್ಪುಪಟ್ಟಿಯಿಂದ ಹೊರಗಿಡುವಂತೆ ಕೇಳಿದೆ. ಭಾರತ ಈ ವಿಷಯದಲ್ಲಿ ಪಾಕಿಸ್ತಾನದ ಕಪ್ಪುಪಟ್ಟಿಗೆ ಒತ್ತಾಯಿಸಿದರೂ, ಭಯೋತ್ಪಾದಕ ಹಣಕಾಸು ನೆರವಿನ ವಿರುದ್ಧ ಕ್ರಮಕೈಗೊಳ್ಳಲು ಒತ್ತಡವನ್ನು ಹೇರಲು ಗ್ರೇ ಪಟ್ಟಿಯಲ್ಲಿ ಇಟ್ಟಿರುವುದು ಒಂದು ಉತ್ತಮ ಸನ್ನಿವೇಶವಾಗಿದೆ ಎಂದು ಈ ವಾರ ಭಾರತದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ವಾದಿಸಿದ್ದರು. ಆದರೆ ಒಮ್ಮೆ ಕಪ್ಪುಪಟ್ಟಿಗೆ ಸೇರಿಸಿದರೆ, ಪಾಕಿಸ್ತಾನವು ಎಲ್ಲ ನೆರವನ್ನು ಕಳೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details