ಕರ್ನಾಟಕ

karnataka

ETV Bharat / bharat

ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ನಾವು ಯುದ್ಧಕ್ಕೂ ರೆಡಿ... ಪಂಥಾಹ್ವಾನ ನೀಡಿದ ಇಮ್ರಾನ್​ಖಾನ್​​​ - ಪಾಕ್​ ಸ್ವತಂತ್ರ ದಿನ

ಭಾರತ-ಪಾಕ್​ ನಡುವೆ ಯುದ್ಧ ಸಂಭವಿಸಿದರೆ ಅದಕ್ಕೆ ಸಂಯುಕ್ತ ರಾಷ್ಟ್ರವೇ ಹೊಣೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೆ ನೀಡಿದ್ದಾರೆ. 73ನೇ ಸ್ವಾತಂತ್ರ್ಯ ದಿನದ ನಿಮಿತ್ತ ಮುಜಫರಾಬಾದ್​​ನಲ್ಲಿ ಮಾತನಾಡಿದ ಅವರು ಈ ಮಾತು ಹೇಳಿದ್ದಾರೆ.

ಇಮ್ರಾನ್​ ಖಾನ್​​/ Imran Khan

By

Published : Aug 14, 2019, 4:47 PM IST

ಮುಜಫರಾಬಾದ್​:ಪಾಕ್​​ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್​​ನಲ್ಲಿ ಸ್ವತಂತ್ರ ದಿನಾಚರಣೆ ನಿಮಿತ್ತ ಭಾಗಿಯಾಗಿ ಮಾತನಾಡಿದ ಅಲ್ಲಿನ ಪ್ರಧಾನಿ ಇಮ್ರಾನ್​ ಖಾನ್ ಭಾರತದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಟ್ಲರ್​​​​ ವಿಚಾರಧಾರೆಗೂ ಮೋದಿ ವರ್ತನೆಗೂ ಯಾವುದೇ ವ್ಯತ್ಯಾಸ ಇಲ್ಲ ಎಂದಿರುವ ಅವರು, ಇದೇ ವೇಳೆ ನೆಪೋಲಿಯನ್​ ಬೋನಾಪಾರ್ಟ್​ ಹಾಗೂ ಇತರರ ಉದಾಹರಣೆ ನೀಡಿ ಅವರೆಲ್ಲ ಏನಾದರೂ ಎಂದು ಪ್ರಶ್ನಿಸಿ, ಯುದ್ಧ ಪರಿಹಾರ ಅಲ್ಲ ಎಂದಿದ್ದಾರೆ.

ಮುಜಫರಾಬಾದ್​​ನ ಅಸೆಂಬ್ಲಿಯಲ್ಲಿ 73ನೇ ಪಾಕ್​ ಸ್ವತಂತ್ರ ದಿನದ ಅಂಗವಾಗಿ ಭಾಗಿಯಾಗಿ ಮಾತನಾಡಿದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಭಾರತದ ವಿರುದ್ಧ ಹರಿಹಾಯ್ದರು.

ಕಾಶ್ಮೀರ್​ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ತೆಗೆದುಕೊಂಡಿರುವ ಕ್ರಮ ಸರಿಯಾಗಿಲ್ಲ. ಎಲ್ಲ ರೀತಿಯ ಕ್ರಮಕ್ಕೂ ನಮ್ಮ ಸೇನೆ ಸಜ್ಜುಗೊಂಡಿದ್ದು, ಒಂದು ವೇಳೆ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಉತ್ತರ ನೀಡಲು ನಾವು ಸಜ್ಜಾಗಿದ್ದೇವೆ. ಪುಲ್ವಾಮಾ ದಾಳಿ ನಡೆದ ಬಳಿಕ ಬಾಲಕೋಟ್​​ನಲ್ಲಿ ಭಾರತೀಯ ಸೇನೆ ದಾಳಿ ನಡೆಸಿದ್ದು, ಇದೀಗ ಪಾಕ್​ ಆಕ್ರಮಿತ ಕಾಶ್ಮೀರದ ಕಡೆ ಅವರು ಬರುವ ಸಾಧ್ಯತೆ ಇದೆ. ಒಂದು ವೇಳೆ ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಅದಕ್ಕೆ ಪ್ರಪಂಚ ಹಾಗೂ ಸಂಯುಕ್ತ ರಾಷ್ಟ್ರ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.

ಕಾಶ್ಮೀರದ ವಿಚಾರವನ್ನ ಇದೀಗ ವಿಶ್ವದ ಮೂಲೆ ಮೂಲೆಗೂ ತಲುಪಿಸಲು ನಾವು ಸನ್ನದ್ಧವಾಗಿದ್ದು, ಅವಶ್ಯಕತೆ ಬಿದ್ದರೆ ಅಂತಾರಾಷ್ಟ್ರೀಯ ಕೋರ್ಟ್​ ಮೆಟ್ಟಿಲೇರುತ್ತೇವೆ ಎಂದು ಹೇಳಿದ್ದಾರೆ. ಕಾಶ್ಮೀರಿ ಜನರ ಧ್ವನಿಗೆ ನಾವು ಸಾಥ್​ ನೀಡಲಿದ್ದು, ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಆರ್​​ಎಸ್​​ಎಸ್​ ಜತೆ ಸೇರಿ ಮುಸ್ಲಿಮರ ಧ್ವನಿ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಅದರ ವಿರುದ್ಧ ನಾವು ಒಂದಾಗಲಿದ್ದೇವೆ ಎಂದು ತಿಳಿಸಿದ್ದಾರೆ.

ಒಂದೆಡೆ ಅಡಾಲ್ಫ್​ ಹಿಟ್ಲರ್, ನೆಪೋಲಿಯನ್ ಉದಾಹರಣೆ ಕೊಟ್ಟು, ಮೋದಿ ಯುದ್ಧೋನ್ಮಾದದಲ್ಲಿದ್ದಾರೆ. ಇದು ತರವಲ್ಲ ಎಂದಿರುವ ಅವರು, ಮರು ಗಳಿಗೆಯಲ್ಲೇ, ಕಾಶ್ಮೀರದ ಸ್ವಾತಂತ್ರ್ಯ ನಾವು ಯುದ್ಧಕ್ಕೂ ಸಿದ್ಧ ಎನ್ನುವ ಮೂಲಕ ಪಂಥಾಹ್ವಾನ ನೀಡಿದರು.

ಅಷ್ಟೇ ಅಲ್ಲ ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಾಗಲಿ ನಾವು ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಘೋಷಣೆ ಮಾಡಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬೆತ್ತಲಾಗಿರುವ ಪಾಕಿಸ್ತಾನ, ಈಗ ಮತ್ತೆ ಈ ವಿಷಯವನ್ನ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸುವ ತನ್ನ ಚಾಳಿಯನ್ನ ಮುಂದುವರೆಸಿದೆ.

ABOUT THE AUTHOR

...view details