ಕರ್ನಾಟಕ

karnataka

ETV Bharat / bharat

ಬರೋಬ್ಬರಿ 35 ವರ್ಷದ ಬಳಿಕ ಪಾಕ್ ಮಹಿಳೆಗೆ ಭಾರತೀಯ ಪೌರತ್ವ...! - ದೀರ್ಘಾವಧಿಯ ವೀಸಾ

1994 ರಿಂದ ಜುಬೇದಾ ದೀರ್ಘಾವಧಿ ವೀಸಾದ ಅಡಿ ಭಾರತದಲ್ಲಿ ವಾಸಿಸುತ್ತಿದ್ದಳು. ಮೂರ್ನಾಲ್ಕು ದಿನಗಳ ಹಿಂದೆ ಆಕೆಯ ಪೌರತ್ವ ಅರ್ಜಿ ಸ್ವೀಕಾರವಾಗಿದೆ.

ಬರೋಬ್ಬರಿ 35 ವರ್ಷದ ಬಳಿಕ ಪಾಕ್ ಮಹಿಳೆಗೆ ಭಾರತೀಯ ಪೌರತ್ವ

By

Published : Oct 4, 2019, 12:26 PM IST

ಮಜಾಫರ್​​ನಗರ:ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ಪಾಕಿಸ್ತಾನ ಮೂಲದ ಮಹಿಳೆಗೆ ಬರೋಬ್ಬರಿ 35 ವರ್ಷದ ಬಳಿಕ ಕೊನೆಗೂ ಭಾರತೀಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

55 ವರ್ಷದ ಜುಬೇದಾ 35 ವರ್ಷದ ಹಿಂದೆ ಉತ್ತರ ಪ್ರದೇಶದ ಯೋಗೇಂದರ್ ನಿವಾಸಿ ಸೈಯದ್ ಮೊಹಮ್ಮದ್ ಜಾವೇದ್ ಎನ್ನುವಾತನನ್ನು ವಿವಾಹವಾಗಿದ್ದಳು. ಮದುವೆಯಾದ ತಕ್ಷಣವೇ ಆಕೆ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಒಂದಷ್ಟು ಕಾನೂನು ತೊಡಕುಗಳಿಂದ ಅರ್ಜಿ ಸ್ವೀಕೃತವಾಗಿರಲಿಲ್ಲ.

1994ರಿಂದ ಜುಬೇದಾ ದೀರ್ಘಾವಧಿಯ ವೀಸಾದ ಅಡಿ ಭಾರತದಲ್ಲಿ ವಾಸಿಸುತ್ತಿದ್ದಳು. ಮೂರ್ನಾಲ್ಕು ದಿನಗಳ ಹಿಂದೆ ಆಕೆಯ ಪೌರತ್ವ ಅರ್ಜಿ ಸ್ವೀಕಾರವಾಗಿದೆ.

ಭಾರತೀಯ ಪೌರತ್ವ ಪಡೆದಿರುವ ಜುಬೇದಾ ಮುಂದಿನ ದಿನಗಳಲ್ಲಿ ಆಧಾರ್, ರೇಷನ್ ಕಾರ್ಡ್​ ಹಾಗೂ ವೋಟರ್ ಐಡಿ ಪಡೆದುಕೊಳ್ಳಬಹುದು.

ಜುಬೇದಾ ದಂಪತಿ ಇಬ್ಬರ ಹೆಣ್ಣುಮಕ್ಕಳಿದ್ದು, ರುಮೇಷಾ(30 ವರ್ಷ) ಹಾಗೂ ಝುಮೇಷಾ(26 ವರ್ಷ) ಇಬ್ಬರಿಗೂ ಮದುವೆಯಾಗಿದೆ.

ABOUT THE AUTHOR

...view details