ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಪಾಕಿಸ್ತಾನ ಮತ್ತೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ, ಮನಕೋಟ್, ನೌಶೇರಾ ಸೆಕ್ಟರ್ನಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಅಪ್ರಚೋದಿತ ದಾಳಿಯಿಂದ ಓರ್ವ ಯೋಧ ಹುತಾತ್ಮನಾಗಿದ್ದಾರೆ.
ಹವೀಲ್ದಾರ್ ದೀಪಕ್ ಕರ್ಕಿ ಹುತಾತ್ಮನಾದ ಯೋಧರಾಗಿದ್ದು, ನೌಶೇರಾ ಸೆಕ್ಟರ್ನಲ್ಲಿ ಯೋಧ ಕಾರ್ಯನಿರ್ವಹಿಸುತ್ತಿದ್ದರು. ಇಂದು ಮುಂಜಾನೆ 3.30ಕ್ಕೆ ಮೊದಲಿಗೆ ನೌಶೇರಾ ಹಾಗೂ ಕೃಷ್ಣಘಾಟಿ ಸೆಕ್ಟರ್ನಲ್ಲಿ ಕದನ ವಿರಾಮ ಉಲ್ಲಂಘನೆ ನಡೆದಿದೆ. ಮತ್ತೆ 5.30ಕ್ಕೆ ನೌಶೇರಾ ಸೆಕ್ಟರ್ನಲ್ಲಿ ಕದನವಿರಾಮ ಉಲ್ಲಂಘಿಸಿ ಪಾಕ್ ಪುಂಡಾಟ ಮೆರೆದಿದೆ.