ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಮತ್ತೆ ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ: ಸೇನೆಯಿಂದ ಪ್ರತ್ಯುತ್ತರ - ಪಾಕ್​ನಿಂದ ಕದಮ ವಿರಾಮ ಉಲ್ಲಂಘನೆ

ಜಮ್ಮುಕಾಶ್ಮೀರದ ಪೂಂಚ್​ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್​ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಬುಧವಾರ ರಾತ್ರಿ ಕದನ ವಿರಾಮ ಉಲ್ಲಂಘಿಸಿದ್ದು, ಸೇನೆಯನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

Pak violates ceasefire in Poonch
ಪಾಕ್​ನಿಂದ ಕದಮ ವಿರಾಮ ಉಲ್ಲಂಘನೆ

By

Published : Jan 2, 2020, 9:43 AM IST

ಪೂಂಚ್(ಜಮ್ಮು):ಗಡಿಯಲ್ಲಿ ಪಾಕ್ ಪುಂಡಾಟ ಮುಂದುವರೆದಿದ್ದು ಮತ್ತೆ ಕದನ ವಿರಾಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ.

ಜಮ್ಮು-ಕಾಶ್ಮೀರದ ಪೂಂಚ್​ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್​ ಬಳಿಯಿರುವ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಕದನ ವಿರಾಮ ಉಲ್ಲಂಘಿಸಿದ್ದು, ಸೇನೆಯನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ಬಳಿಕ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ರಾತ್ರಿ 11 ಗಂಟೆವರೆಗೂ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details