ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಶಹಪುರ್, ಕಿರ್ನಿ ಮತ್ತು ಕಸ್ಬಾ ವಲಯಗಳಲ್ಲಿನ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಮತ್ತೆ ಕದನ ವಿರಾಮ ಉಲ್ಲಂಘನೆ: ಫೂಂಚ್ ಜಿಲ್ಲೆಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ - ಫೂಂಚ್ ಜಿಲ್ಲೆಯಲ್ಲಿ ಪಾಕ್ ಗುಂಡಿನ ದಾಳಿ
ಪಾಪಿ ಪಾಕಿಸ್ತಾನ ತನ್ನ ದುರ್ಬುದ್ಧಿಯನ್ನು ಮುಂದುವರಿಸಿದೆ. ನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆಯು ತಕ್ಕ ಪ್ರತ್ಯತ್ತರ ನೀಡಿದೆ.
ಫೂಂಚ್ ಜಿಲ್ಲೆಯಲ್ಲಿ ಪಾಕ್ ಗುಂಡಿನ ದಾಳಿ
"ಪಾಕಿಸ್ತಾನವು ಎಲ್‌ಒಸಿ ಉದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದ್ದು, ಇಂದು ಪೂಂಚ್ ಜಿಲ್ಲೆಯ ಶಹಪುರ್, ಕಿರ್ನಿ, ಮತ್ತು ಕಸ್ಬಾ ವಲಯಗಳಲ್ಲಿ ಎಲ್‌ಒಸಿ ಉದ್ದಕ್ಕೂ ಗುಂಡು ಮತ್ತು ಶೆಲ್ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯು ಸೂಕ್ತವಾದ ಪ್ರತ್ಯತ್ತರ ನೀಡಿದೆ" ಎಂದು ಜಮ್ಮುವಿನ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.