ಕರ್ನಾಟಕ

karnataka

ETV Bharat / bharat

ಪುಲ್ವಾಮಾ ದಾಳಿ ಕುರಿತ ಪಾಕ್​ ವರದಿ: ಶತ್ರು ರಾಷ್ಟ್ರದ ವಿರುದ್ಧ ಭಾರತ ಕಿಡಿ - ವಿದೇಶಾಂಗ ಇಲಾಖೆ

ಪುಲ್ವಾಮಾ ದಾಳಿಯ ಕುರಿತ ಪಾಕಿಸ್ತಾನದ ವರದಿಯಿಂದ ಬೇಸರವಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಅಲ್ಲದೆ, ಪಾಕಿಸ್ತಾನದ ಕಪಟ ನಡೆಗೆ ಕಿಡಿಕಾರಿದೆ.

ಪುಲ್ವಾಮ ದಾಳಿ ಕುರಿತ ಪಾಕ್​ ವರದಿ ವಿರುದ್ಧ ಭಾರತದ ವಿದೇಶಾಂಗ ಇಲಾಖೆ ಟೀಕೆ

By

Published : Mar 29, 2019, 9:18 AM IST

ನವದೆಹಲಿ:ಪುಲ್ವಾಮಾ ದಾಳಿ ಕುರಿತ ಭಾರತದ ಆರೋಪಗಳು ಸುಳ್ಳು ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿ, ನಾಜೂಕಾಗಿ ಜಾರಿಕೊಂಡಿರುವ ಪಾಕಿಸ್ತಾನದ ವಿರುದ್ಧ ಭಾರತ ಕಿಡಿಕಾರಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಇಲಾಖೆ, ಪುಲ್ವಾಮಾ ದಾಳಿಯಲ್ಲಿ ಜೈಷೆ ಮೊಹಮ್ಮದ್​ನ ಕೈವಾಡದ ಬಗ್ಗೆ ನಾವು ವಿವರವಾದ ದಾಖಲೆ ನೀಡಿದ್ದರೂ ಪಾಕ್​ ಸಲ್ಲಿಸಿದ ಈ ವರದಿ ಬೇಸರ ತರಿಸಿದೆ. ಪಾಕಿಸ್ತಾನದಲ್ಲಿ ಉಗ್ರರ ನೆಲೆಗಳಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದರೂ ಪಾಕ್​ ಅಲ್ಲಗಳೆದಿದೆ ಎಂದು ಹೇಳಿದೆ.

ಪಾಕಿಸ್ತಾನ​ ಈ ವರದಿ ಆಚ್ಚರಿ ಮೂಡಿಸಿದೆ. 2008ರ ಮುಂಬೈ ದಾಳಿ ಹಾಗೂ 2016 ಪಠಾಣ್​ಕೋಟ್​ ದಾಳಿ ವೇಳೆ ಇಂತಹುದೇ ವರದಿಯನ್ನು ಪಾಕಿಸ್ತಾನ ನೀಡಿತ್ತು ಎಂದು ಛೇಡಿಸಿದೆ.

ಭಾರತದ ವಿರುದ್ಧ ತನ್ನ ನೆಲೆದಲ್ಲಿ ಉಗ್ರಗಾಮಿ ಚಟುವಟಿಕೆ ನಡೆಸಲು ಅನುಮತಿ ನೀಡಲ್ಲವೆಂದು 2004ರಲ್ಲೇ ಪಾಕ್​ ಒಪ್ಪಿಕೊಂಡಿದ್ದರೂ, ಮತ್ತದೇ ಚಾಳಿ ಮುಂದುವರೆಸಿದೆ. ಇನ್ನಾದರೂ ಉಗ್ರವಾದದ ವಿರುದ್ಧ ಪಾಕ್​ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಭಾರತ ಒತ್ತಾಯಿಸಿದೆ.

ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಉಗ್ರರ ಕೈವಾಡವಿರುವ ಬಗ್ಗೆ ಸಮಗ್ರ ವರದಿಯಲ್ಲಿ ಪಾಕ್​ ಹೈಕಮಿಷನರ್​ಗೆ ನೀಡಲಾಗಿತ್ತು. ಈ ಬಗ್ಗೆ 10 ಸದಸ್ಯರ ತಂಡ ಅಧ್ಯಯನ ನಡೆಸಿದೆ ಎಂದು ಹೇಳಿದ್ದ ಪಾಕ್​, ನಿನ್ನೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಭಾರತದ ಆರೋಪಗಳು ಸುಳ್ಳು ಎಂಬರ್ಥದಲ್ಲಿ ಉಲ್ಲೇಖಿಸಿದೆ. ಭಾರತ ಏರ್​​ಸ್ಟ್ರೈಕ್​ ನಡೆಸಿದ ಪಾಕ್​ನ ಪ್ರದೇಶಗಳಲ್ಲಿ ಉಗ್ರರ ನೆಲೆಗಳೇ ಇಲ್ಲವೆಂದು ಮತ್ತೆ ತನ್ನ ಕಪಟ ಬುದ್ಧಿಯನ್ನು ಪ್ರದರ್ಶಿಸಿದೆ.

ಪುಲ್ವಾಮಾ ದಾಳಿಯಲ್ಲಿ ಮಸೂದ್​ ಅಜರ್​ ಪಾತ್ರವಿರುವ ಯಾವ ದಾಖಲೆಗಳನ್ನೂ ಭಾರತ ನೀಡಿಲ್ಲವೆಂದು ಪಾಕ್​ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್​​ ಫೈಸ್​ ನಿನ್ನೆ ಹೇಳಿದ್ದಾರೆ. ಭಾರತ ಸರಿಯಾದ ದಾಖಲೆ ನೀಡಿದರೆ ಖಂಡಿತ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.


ABOUT THE AUTHOR

...view details