ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಹಿರಾನಗರ್ ಸೆಕ್ಟರ್‌ನಲ್ಲಿರುವ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಫಾರ್ವರ್ಡ್ ಪೋಸ್ಟ್‌ಗಳ ಮೇಲೆ ಪಾಕಿಸ್ತಾನ ರೇಂಜರ್ಸ್ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಭಾರತ - ಪಾಕ್ ಗಡಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೆ ಗುಂಡಿನ ಚಕಮಕಿ ! - ಗುಂಡಿನ ಚಕಮಕಿ
ಬುಧವಾರ ಮುಂಜಾನೆ 4.30 ರವರೆಗೆ ಭಾರತ - ಪಾಕ್ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ.
ಬುಧವಾರ ಮುಂಜಾನೆ 4.30 ರವರೆಗೆ ಭಾರತ-ಪಾಕ್ ನಡುವೆ ಗುಂಡಿನ ಚಕಮಕಿ !
ಗಡಿ ಹೊರಠಾಣೆ ಪ್ರದೇಶಗಳಾದ ಸತ್ಪಾಲ್, ಮಾನ್ಯಾರಿ, ಕರೋಲ್ ಕೃಷ್ಣ ಮತ್ತು ಗುರ್ಣಂನಲ್ಲಿ ಮಂಗಳವಾರ ರಾತ್ರಿ 9:10ಕ್ಕೆ ಭಾರತಯದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕೂಡ ಪ್ರತಿದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮುಂಜಾನೆ 4.30 ರವರೆಗೆ ಭಾರತ - ಪಾಕ್ ನಡುವೆ ಗುಂಡಿನ ಚಕಮಕಿ ಮುಂದುವರೆದಿತ್ತು. ಘಟನೆಯಲ್ಲಿ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಗಡಿ ನಿವಾಸಿಗಳಲ್ಲಿ ಭೀತಿ ಯುಂಟಾಗಿದೆ.