ಈ ಬಗ್ಗೆ ಭಾರತ ವಿದೇಶಾಂಗ ಇಲಾಖೆ ದೃಢಪಡಿಸಿದ್ದು, ಅಂಕಿ- ಸಂಖ್ಯೆ ಹೇಳದಿದ್ದರೂ ಹಲವರು ಉಗ್ರರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ನಡುವೆ ಭಾರತೀಯ ಸೇನೆಯ ಕಾರ್ಯಾಚರಣೆಗೆ ಬೇಷ್ ಎಂಬ ಉದ್ಘಾರ ವ್ಯಕ್ತವಾಗ್ತಿದೆ.
ಪುಲ್ವಾಮಾ ದಾಳಿಗೆ ಪ್ರತೀಕಾರ.... ನಿದ್ರೆಯಲ್ಲೇ ಬೆವಿತ ಇಮ್ರಾನ್ ಖಾನ್!
ಫೆಬ್ರವರಿ 14 ರಂದು ಪುಲ್ವಾಮದಲ್ಲಿ 40 ಭಾರತೀಯ ಸೈನಿಕರನ್ನ ಬಲಿತೆಗೆದುಕೊಂಡಿದ್ದ ಜೈಷೆ ಮೊಹಮ್ಮದ್ ಉಗ್ರರ ದಾಳಿಗೆ ಭಾರತ ಸೇನೆ ಪ್ರತೀಕಾರ ತೆಗೆದುಕೊಂಡಿದೆ. ಭಾರತೀಯ ವಾಯುಪಡೆ ನಿನ್ನೆ ಬಾಲಕೋಟ್, ಮುಜಾಫರಾಬಾದ್, ಚಕೋಠಿಯಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ಉಗ್ರರನ್ನ ಕೊಂದು ಹಾಕಿದೆ.
ಕಾರ್ಟೂನ್ ಚಿತ್ರ
ಮತ್ತೊಂದು ಕಡೆ, ಪಾಕಿಸ್ತಾನ ನಿದ್ರೆಯಲ್ಲೂ ಚಡಪಡಿಸುವಂತಾಗಿದೆ. ಈ ಬಗ್ಗೆ ಬಗೆ ಕಾರ್ಟೂನ್ಗಳು ಪಾಕಿಸ್ತಾನದ ಸ್ಥಿತಿಯನ್ನ ಮಹಬೂತ್ ಆಗಿ ಕಟ್ಟಿಕೊಡುತ್ತಿವೆ... ಅಂತಹ ಒಂದು ಇಂಟ್ರೆಸ್ಟಿಂಗ್ ವ್ಯಂಗ್ಯ ಚಿತ್ರ ಇಲ್ಲಿದೆ.
Last Updated : Feb 26, 2019, 7:05 PM IST