ನವದೆಹಲಿ :ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಭಾರತ ತನ್ನ ದೇಶದ ಮೇಲೆ ಸರ್ಜಿಕಲ್ ಸ್ಟ್ರೈಕ್ ಯೋಜಿಸುತ್ತಿದೆ ಎಂದು ಹೇಳಿಕೊಂಡ ಕೆಲವೇ ಗಂಟೆಗಳ ನಂತರ ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ(ಎನ್‌ಎಸ್‌ಎಬಿ) ಮುಖ್ಯಸ್ಥರು ಈ ಹೇಳಿಕೆಯನ್ನು ಅಪಹಾಸ್ಯ ಮಾಡಿ ತಳ್ಳಿ ಹಾಕಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಹೇಳಿಕೆಯನ್ನು ಅಪಹಾಸ್ಯ ಮಾಡಿದ ಎನ್ಎಸ್ಎಬಿ ಅಧ್ಯಕ್ಷ ಪಿಎಸ್ ರಾಘವನ್, "ಪಾಕಿಸ್ತಾನವು ಭಾರತದ ವಿರುದ್ಧ ಎಸಗಿರುವ ಕೆಲವು ದುಷ್ಕೃತ್ಯಗಳನ್ನು ಮರೆಮಾಚಲು ಇಂತಹ ಹೇಳಿಕೆಗಳನ್ನು ನೀಡುತ್ತಿದೆ.
ಇದೇ ಮೊದಲೇನಲ್ಲ ಕಳೆದ 73 ವರ್ಷಗಳಿಂದಲೂ ನಾವು ನೋಡಿಕೊಂಡು ಬಂದಿರುವ ಪಾಕಿಸ್ಥಾನದ ಪ್ರಸಿದ್ಧ ಟ್ರೇಡ್‌ಮಾರ್ಕ್ ಆಗಿದೆ ಎಂದು ಈಟಿವಿ ಭಾರತಕ್ಕೆ ಫೋನ್ ಮೂಲಕ ತಿಳಿಸಿದರು.
ರಾಷ್ಟ್ರೀಯ ಭದ್ರತೆ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಸಲಹೆ ನೀಡುವ ಮೊಯೀದ್ ಯೂಸುಫ್,“ಯುಎಇಯಲ್ಲಿನ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದಂತೆ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಲು ಪ್ರಯತ್ನಿಸುತ್ತಿರುವ ಭಾರತೀಯ ಯೋಜನೆಗಳ ಬಗ್ಗೆ ನಮಗೆ ನಿರ್ದಿಷ್ಟ ಮಾಹಿತಿ ಇದೆ” ಎಂದು ಟ್ವೀಟ್ ಮಾಡಿದ್ದಾರೆ.
"ಭಾರತವು ಏನೇನು ಮಾಡಬೇಕೆಂದು ಯೋಜಿಸಿದೆ ಎಂದು ನಿಖರವಾಗಿ ನಮಗೆ ತಿಳಿದಿದೆ ಎಂಬುದನ್ನು ನಾವು ಜಗತ್ತಿಗೆ ತಿಳಿಸಿದ್ದೇವೆ. ಕೆಲವು ರಾಜಧಾನಿಗಳಿಗೂ ಈಗಾಗಲೇ ಇದರ ಅರಿವಿದೆ ಎಂದು ನಮಗೆ ತಿಳಿದಿದೆ ”ಎಂದು ಯಸೂಪ್ ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.