ನವದೆಹಲಿ: ಅಬುದಾಬಿಯಲ್ಲಿ ಆಯೋಜನೆಯಾಗಿರುವ ಇಸ್ಲಾಮಿಕ್ ಸಹಕಾರ ಸಂಘದ ವಿದೇಶಾಂಗ ಮಂತ್ರಿಗಳ ಕೌನ್ಸಿಲ್ನ ಸಭೆಯಿಂದ ಪಾಕ್ ಹಿಂದೆ ಸರಿದಿದೆ.
ಪಾಕ್‌ಗೆ ರಾಜತಾಂತ್ರಿಕ ಹಿನ್ನಡೆ.. ಇಸ್ಲಾಮಿಕ್ ಕೌನ್ಸಿಲ್ ಸಭೆಗೆ ಗೈರು..! - ಸುಷ್ಮಾ ಸ್ವರಾಜ್
ಇದೇ ಮೊದಲ ಬಾರಿಗೆ ಈ ಸಭೆಯಲ್ಲಿ ಭಾರತಕ್ಕೆ ಗೌರವ ಅತಿಥಿಯಾಗಿ ಆಹ್ವಾನ ನೀಡಿದೆ. ಈ ನಿಟ್ಟಿನಲ್ಲಿ ಶುಕ್ರವಾರ ರಾತ್ರಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಬುದಾಬಿ ತಲುಪಿದ್ದಾರೆ.

ಶಾ ಮಹಮೂದ್ ಖುರೇಷಿ
ಭಾರತ ಭಾಗಿ ಹಾಗೂ ಸದ್ಯ ಉಭಯ ದೇಶದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಿಂದೆ ಸರಿದಿದೆ ಎನ್ನಲಾಗಿದೆ. ಪಾಕ್‌ನ ಈ ಸಭೆಯಲ್ಲಿ ಭಾಗಿವಹಿಸುತ್ತಿಲ್ಲ ಎಂದು ಶುಕ್ರವಾರ ತಡರಾತ್ರಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಸ್ಪಷ್ಟಪಡಿಸಿದ್ದಾರೆ. ಕೆಳ ಹಂತದ ಪಾಕ್ ಅಧಿಕಾರಿಗಳು ನಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಖುರೇಷಿ ಹೇಳಿದ್ದಾರೆ.