ಕರ್ನಾಟಕ

karnataka

ETV Bharat / bharat

ವಾಯುಪ್ರದೇಶ ಬಳಸಿಕೊಳ್ಳುವ ಪ್ರಧಾನಿ ಮೋದಿ ಮನವಿಗೆ ಪಾಕ್ ನಿರಾಕರಣೆ - ಪ್ರಧಾನಿ ಮೋದಿ ಸುದ್ದಿ

ಪಾಕಿಸ್ತಾನ ಮತ್ತೆ ಮತ್ತೆ ಭಾರತದ ಮೇಲೆ ಮುಗಿಬೀಳುತ್ತಿದ್ದು, ಈಗ ಸೌದಿ ಅರೇಬಿಯಾಗೆ ತೆರಳುತ್ತಿರುವ ಪ್ರಧಾನಿ ಮೋದಿ ವಿಮಾನಕ್ಕೆ ವಾಯುಪ್ರದೇಶ ಬಳಸಲು ಪಾಕ್​ ನಿರಾಕರಿಸಿರುವ ಮಾಹಿತಿ ಲಭಿಸಿದೆ.

ಮೋದಿ ಮನವಿಗೆ ಪಾಕ್ ನಿರಾಕರಣೆ

By

Published : Oct 27, 2019, 5:02 PM IST

Updated : Oct 27, 2019, 5:30 PM IST

ನವದೆಹಲಿ/ಇಸ್ಲಮಾಬಾದ್​:ಪಾಕಿಸ್ಥಾನ ಮಾಧ್ಯಮಗಳು ಹೀಗೊಂದು ವರದಿ ಬಿತ್ತರಿಸಿದ್ದು, ಸೌದಿ ಅರೇಬಿಯಾಗೆ ತೆರಳುತ್ತಿರುವ ಪ್ರಧಾನಿ ಮೋದಿ ವಿಮಾನಕ್ಕೆ ವಾಯುಪ್ರದೇಶ ಬಳಸಲು ಪಾಕ್​ ನಿರಾಕರಿಸಿದೆಯಂತೆ.

ಈ ವಾರ ಎರಡು ದಿನಗಳ ಪಶ್ಚಿಮ ಏಷ್ಯಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಸೌದಿ ಅರೇಬಿಯಾಗೆ ತೆರಳಲಿದ್ದಾರೆ. ಹೀಗಾಗಿ ತಾವು ಪ್ರಯಾಣಿಸುವ ವಿಮಾನಕ್ಕೆ ವಾಯು ಪ್ರದೇಶ ಬಳಸಿಕೊಳ್ಳಲು ಅನುಮತಿ ನೀಡುವಂತೆ ಮೋದಿ ಪಾಕ್​ಗೆ ಲಿಖಿತ ಮನವಿ ಸಲ್ಲಿಸಿದ್ದರು. ಈ ಮನವಿಗೆ ಒಪ್ಪಿಗೆ ಸೂಚಿಸಲು ಪಾಕ್​ ನಿರಾಕರಿಸಿದೆ ಎಂದು ಪಾಕ್​ ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಪಾಕ್​ ವಿದೇಶಾಂಗ ಸಚಿವ ಶಾ ಮೆಹ್ಮೂದ್​ ಖುರೇಷಿ ಭಾರತದ ಹೈಕಮಿಷನರ್​ಗೆ ಲಿಖಿತ ಹೇಳಿಕೆ ನೀಡಲಿದ್ದಾರೆ ಎಂದು ಪಾಕ್​ ಮಾಧ್ಯಮಗಳು ಹೇಳಿವೆ. ಆದರೆ ಈ ಬಗ್ಗೆ ಭಾರತ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆ ಅಮೆರಿಕಾಗೆ ತೆರಳಬೇಕಿದ್ದ ಪ್ರಧಾನಿ ಮೋದಿಯವರ ವಿಮಾನಕ್ಕೂ ವಾಯು ಪ್ರದೇಶ ಬಳಕೆಗೆ ಪಾಕ್​ ನಿರಾಕರಿಸಿತ್ತು. ಅಲ್ಲದೆ ಅದಕ್ಕೂ ಮೊದಲು ಐಸ್ಲ್ಯಾಂಡ್​ಗೆ ತೆರಳುತ್ತಿದ್ದ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೂ ಪಾಕ್ ತಡೆಯೊಡ್ಡಿತ್ತು.

Last Updated : Oct 27, 2019, 5:30 PM IST

ABOUT THE AUTHOR

...view details