ಕರ್ನಾಟಕ

karnataka

ETV Bharat / bharat

ಪಿಒಕೆ ಪ್ರಾಂತ್ಯದಲ್ಲಿ ವ್ಯಾಪಿಸುತ್ತಿದೆ ಸ್ವಾತಂತ್ರ್ಯದ ಕಿಚ್ಚು..! ಪಾಕಿಸ್ತಾನಕ್ಕೆ ಶುರುವಾಗಿದೆ ನಡುಕ

ಸದ್ಯ ಪಿಒಕೆ ಭಾಗದಲ್ಲಿ ಸ್ವಾತಂತ್ರ್ಯದ ಕೂಗು ಕೇಳಿ ಬರುತ್ತಿದೆ ಎನ್ನುವ ವಿಚಾರವನ್ನು ಅಮೆರಿಕ ಖ್ಯಾತ ಪತ್ರಿಕೆ ನ್ಯೂಯಾರ್ಕ್​ ಟೈಮ್ಸ್ ವರದಿ ಮಾಡಿದೆ.

By

Published : Sep 20, 2019, 6:54 AM IST

Updated : Sep 20, 2019, 9:55 AM IST

ಪಿಒಕೆ ಪ್ರಾಂತ್ಯದಲ್ಲಿ ವ್ಯಾಪಿಸುತ್ತಿದೆ ಸ್ವಾತಂತ್ರ್ಯದ ಕಿಚ್ಚು

ಮುಜಾಫರಾಬಾದ್:ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ಹಿಂಪಡೆದ ಬಳಿಕ ಇದೀಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸ್ವಾತಂತ್ರ್ಯ ಕಿಡಿ ಹೊತ್ತಿದೆ.

ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರದ ದಿಟ್ಟ ನಿಲುವು ಪಾಕಿಸ್ತಾನಕ್ಕೆ ಭಾರಿ ತಲೆನೋವಾಗಿದ್ದು, ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಪಾಕ್ ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಸದ್ಯ ಪಾಕ್ ಆಕ್ರಮಿತ ಪಾಶ್ಮೀರ(ಪಿಒಕೆ) ಪ್ರದೇಶ ಕೈತಪ್ಪುವ ಭೀತಿ ಪಾಕಿಸ್ತಾನ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಪಾಕ್​ ಆರ್ಮಿ ವಿರುದ್ಧ ಭುಗಿಲೆದ್ದ ಆಕ್ರೋಶ... ಕಾಶ್ಮೀರಿಗಳಂತೆ ನಮಗೂ ಸ್ವಾತಂತ್ರ್ಯ ನೀಡಿ ಎಂದ POK!

ಸದ್ಯ ಪಿಒಕೆ ಭಾಗದಲ್ಲಿ ಸ್ವಾತಂತ್ರ್ಯದ ಕೂಗು ಕೇಳಿ ಬರುತ್ತಿದೆ ಎನ್ನುವ ವಿಚಾರವನ್ನು ಅಮೆರಿಕ ಖ್ಯಾತ ಪತ್ರಿಕೆ ನ್ಯೂಯಾರ್ಕ್​ ಟೈಮ್ಸ್ ವರದಿ ಮಾಡಿದೆ.

ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಕೆಲ ಪತ್ರಕರ್ತರು ಪಿಒಕೆ ಪ್ರಾಂತ್ಯಕ್ಕೆ ತೆರಳಿದ್ದು ಈ ವೇಳೆ ಅಲ್ಲಿನ ನಿವಾಸಿಗಳ ಮಾತಿಗೆ ಕಿವಿಯಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ಪ್ರಾಬಲ್ಯ ಮಿತಿ ಮೀರುತ್ತಿದೆ. ಈ ಹಿಡಿತದಿಂದ ಹೊರಬರಲು ಅಲ್ಲಿನ ಸ್ಥಳೀಯರು ಮನಸ್ಸು ಮಾಡಿದ್ದಾರೆ ಎಂದು ನ್ಯೂಯಾರ್ಕ್​ ಟೈಮ್ಸ್ ಹೇಳಿದೆ.

ಶ್ರೀನಗರ ಬೇಕು ಅಂತಿದ್ದ ನಮಗೆ ಪಿಒಕೆ ಪ್ರದೇಶ ಉಳಿಸುವ ಸವಾಲು ಎದುರಾಗಿದೆ: ಬಿಲಾವಲ್ ಭುಟ್ಟೋ

ಪಿಒಕೆ ಭಾಗದಲ್ಲಿ ಸ್ವಾತಂತ್ರ್ಯದ ಪ್ರಚಾರಗಳು ದೊಡ್ಡ ಮಟ್ಟದಲ್ಲಿ ಜನರನ್ನು ಆಕರ್ಷಿಸುತ್ತಿವೆ ಎಂದು ಸ್ವತಃ ಅಲ್ಲಿನ ನಿವಾಸಿಗಳೇ ಹೇಳಿದ್ದಾರೆ. ಆದರೆ ಅಲ್ಲಿನ ಸ್ವಾತಂತ್ರ್ಯ ಹೋರಾಟಗಳು ಪಾಕ್ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ. ಜೊತೆಗೆ ಅಲ್ಲಿನ ನಿವಾಸಿಗಳಿಗೆ ಮೊಬೈಲ್ ಬಳಕೆ ನಿಷೇಧಿಸಿರುವುದಲ್ಲದೆ ಇಂಟರ್​ನೆಟ್ ಸಂಪರ್ಕವೂ ಲಭ್ಯವಿಲ್ಲ.

ಪಾಕಿಸ್ತಾನದಿಂದ ಪಿಒಕೆ ಭಾಗದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎನ್ನುವುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸುವ ಪ್ರಯತ್ನವನ್ನು ಅಂತಾರಾಷ್ಟ್ರೀಯ ಮಾಧ್ಯಮಗಳು ಮಾಡುತ್ತಿದ್ದಾರೆ.

Last Updated : Sep 20, 2019, 9:55 AM IST

ABOUT THE AUTHOR

...view details